Mankutimmana Kagga by D.V. Gundappa
ಮೃಗಶೇಷವಿರುವನಕ ಜಗಳ ತಪ್ಪದು ಜಗದಿ । ಹಗೆಗೆ ಕೊಲದವರು ಹಸಿವಿಂದ ಕೊಂದಾರು ॥ ಟಗರು ಜೂಜೋ ಸಭೆಯ ರಗಳೆಯೋ ಕುಸ್ತಿಯೋ । ಸೊಗ ಜನಕೆ ರಣರಂಗ - ಮಂಕುತಿಮ್ಮ ॥ ೮೭೯ ॥
mRuga shEShavu iruvanaka jagaLa tappadu jagadi । hagege koladavaru hasivinda kondAru ॥ Tagaru jUjO sabheya ragaLeyO kustiyO । soga janake raNaranga - Mankutimma ॥ 879 ॥
ಮನುಷ್ಯನಲ್ಲಿ ಮೃಗಾಂಶದ ಶೇಷವಿರುವತನಕ ಈ ಜಗತ್ತಿನಲ್ಲಿ ಜಗಳ ತಪ್ಪುವುದಿಲ್ಲ. ದ್ವೇಷಕ್ಕೆ ಕೊಲ್ಲದಿದ್ದರೂ, ಹಸಿವಿನಿಂದ ಕೊಂದಾರು. ಇವರಿಗೆ ಒಟ್ಟಾರೆ ಜಗಳ ಅಥವಾ ಕಲಹದಲ್ಲಿ ಆಸಕ್ತಿ. ತಾವು ಜಗಳವಾಡದಿದ್ದರೂ, ಅದು ಟಗರುಗಳ ಹೋರಾಟದ ಜೂಜಾಗಲೀ, ಒಂದು ಸಭೆಯಲ್ಲಿ ನಡೆಯುವ ರಗಳೆಯ ಜಗಳವಾಗಲೀ ಅಥವಾ ಅಖಾಡದಲ್ಲಿ ಮಲ್ಲರ ನಡುವೆ ನಡೆಯುವ ಕುಸ್ತಿಯ ಪಂದ್ಯವಾಗಲೀ, ಅನ್ಯರು ಆಡುವ ಜಗಳವನ್ನಾದರೂ ನೋಡಿ ಸಂತಸಪಡುವ ಪ್ರವೃತ್ತಿ ಮನುಷ್ಯನದು, ಎಂದು ಮಾನವರಲ್ಲಿನ ಮೃಗತ್ವದ ಗುಣಗಳನ್ನು ವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"As long as there is any animal instinct left in a man, there will be conflict, quarrels and wars. People many not kill out of hatred, but they will kill due to hunger. Man has always enjoyed watching conflict - be in ram fighting, arguments in an meeting or organized fighting." - Mankutimma
Video Coming Soon
Detailed video explanations by scholars and experts will be available soon.