Back to List

Kagga 878 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಒಡೆಯದಿರು ತಳಹದಿಯ ಸರಿವಡಿಪೆನದನೆಂದು । ಸಡಲಿಸುವ ನೀಂ ಮರಳಿ ಕಟ್ಟಲರಿತವನೇಂ? ॥ ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೆ? । ದುಡುಕದಿರು ತಿದ್ದಿಕೆಗೆ - ಮಂಕುತಿಮ್ಮ ॥ ೮೭೮ ॥

oDeyadiru talahadiya sarivaDipenu adanendu । saDalisuva nIm maraLi kaTTalaritavanEm? ॥ giDava sari beLeyisalu buDava kILvudu sariye? । duDukadiru tiddikege - Mankutimma ॥ 878 ॥

Meaning in Kannada

ಇರುವುದನ್ನು ಸರಿಪಡಿಸುವ ಭರಾಟೆಯಲ್ಲಿ ಅದರ ಅಡಿಪಾಯವನ್ನು ಅಲುಗಾಡಿಸಬೇಡ.ನಿನಗೆ ಮತ್ತೆ ಅದನ್ನು ಹಾಗೆ ಕಟ್ಟಲು ಗೊತ್ತಿದೆಯೇನು? ಒಂದು ಗಿಡವ ಸರಿಯಾಗಿ ಬೆಳೆಸಲು ಅದರ ಬೇರುಗಳನ್ನೇ ಕೀಳುವುದು ಸರಿಯೇ? ಹಾಗಾಗಿ ಇರುವುದನ್ನು ತಿದ್ದಲು ಆತುರಪಡಬೇಡ ಎಂದು ಒಂದು ಸೂಕ್ತ ಹಿತವಚನವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Don't break the foundation even if you intend to only correct it. Before shaking it have you thought through if would be capable of building it again? If you want the plant to grow well, you should not replant it elsewhere by plucking its roots. One must not hurry to change others." - Mankutimma

Themes

DeathFateSociety

Video Section

Video Coming Soon

Detailed video explanations by scholars and experts will be available soon.