Back to List

Kagga 877 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮತಿವಂತರಿದ್ದರಲ ನಮ್ಮ ಹಿಂದೆಯುಮಿಲ್ಲಿ । ಹಿತಚಿಂತಕರು ಜನಕೆ, ಕೃತಪರಿಶ್ರಮರು? ॥ ಅತಿವೈದ್ಯದಿಂದ ಹೊಸರುಜಿನಕೆಡೆಯಾದೀತೊ । ಮಿತಿಯಿಂ ನವೀಕರಣ - ಮಂಕುತಿಮ್ಮ ॥ ೮೭೭ ॥

mativantariddarala namma hindeyum illi । hita chintakaru janake, kRuta parishramaru? ॥ ati vaidyadinda hosa rujinake eDeyAdIto । mitiyim navIkaraNa - Mankutimma ॥ 877 ॥

Meaning in Kannada

ಈ ಭೂಮಿಯಲ್ಲಿ ನಮಗಿಂತ ಹಿಂದೆ ಬುದ್ಧಿವಂತರು ಇದ್ದರಲ್ಲವೇ? ಸರ್ವ ಜನರ ಹಿತದ ಬಗ್ಗೆ ಚಿಂತೆಮಾಡುವವರು ಇದ್ದರಲ್ಲವೇ? ಜಗತ್ತಿನ ಒಳಿತಿಗಾಗಿ ದುಡಿದವರು ಇದ್ದರಲ್ಲವೇ? ಅತಿಯಾದ ವೈದ್ಯದಿಂದ ಹೊಸರೋಗಕ್ಕೆ ಎಣೆ ಮಾಡಿಕೊಟ್ಟಂತೆ, ಇರುವುದನ್ನು ಅತಿಯಾಗಿ, ತೀವ್ರತೆಯಿಂದ ಬದಲಿಸಿದೆ, ಮಿತಿಯಿಂದ ನವೀನತೆಯನ್ನು ಕಂಡುಕೊಳ್ಳಬೇಕು, ಎಂದು ಒಂದು ಸೂಚನೆ ಮತ್ತು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"There were intelligent people even before us her. They also thought about the general well being of the entire world. They worked hard too. What is so special about our efforts? If we over-do the change, then it may lead to new diseases (physical, mental and social). Let the change and modernization be in moderation." - Mankutimma

Themes

LifeSocietyDuty

Video Section

Video Coming Soon

Detailed video explanations by scholars and experts will be available soon.