Back to List

Kagga 876 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸಿಂಧುವನು ಹಿಮಗಿರಿಗೆ ಹಿಂದಿರುಗಿ ಬೇರೊಂದು । ಚೆಂದದಲಿ ಪರಿದು ಬಾರೆಂದಾಣತಿಪೆಯಾ? ॥ ಸಂದರ್ಭವಿಡಿದು ಜನಚೈತನ್ಯ ಪರಿದಿಹುದು । ಅಂಧಗತಿಯಲ್ಲವದು - ಮಂಕುತಿಮ್ಮ ॥ ೮೭೬ ॥

sindhuvanu himagirige hindirugi bErondu । chendadali paridu bArendu aaNatipeyaa? ॥ sandarbhaviDidu janachaitanya paridihudu । andhagatiyallavadu - Mankutimma ॥ 876 ॥

Meaning in Kannada

ಹಿಮಾಲಯದಿಂದ ಹರಿದು ಬರುವ ಸಿಂಧೂ ನದಿಯನ್ನು ‘ಹಿಮಾಲಯಕ್ಕೆ ಹಿಂದಕ್ಕೆ ಹೋಗಿ ಬೇರೆಯ ರೀತಿಯ ವೈಯ್ಯಾರದಿಂದ ಹರಿದು ಬಾ’ ಎಂದು ಹೇಳಲಾಗುತ್ತದೆಯೇ? ಭೂಮಿಯ ಮೇಲ್ಮೈ, ಇಳಿಜಾರು ಹೇಗಿದೆಯೋ ಅದರಂತೆ ಸಹಜವಾಗಿ ಹರಿದು ಬರುತ್ತಿದೆ,ಸಿಂಧು. ಇದೇ ರೀತಿ ಕಾಲವನ್ನುಸರಿಸಿ ಸಂಧರ್ಭಕ್ಕನುಸಾರವಾಗಿ ಜನರ ಜೀವನದ ಗತಿ ಸಾಗುತ್ತದೆ. ಆದರೆ ಜನ ಜೀವನದ ಗತಿ ಕುರುಡುಗತಿ ಅಲ್ಲ, ಎಂದು ಬದುಕು ಎಷ್ಟು ಸಹಜವಾಗಿ ಮುಂದೆ ಹೋಗುತ್ತದೆ ಎನ್ನುವುದಕ್ಕೆ ಒಂದು ಉಪಮೆಯ ಸಹಿತ ವಿವರಿಸಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Do you think you can order River Indus to go back to the Himalayas and flow in a different beautiful way? Human energy and resulting culture is also like that. It follows and changes according to the circumstances reacting the best it can to the current situations. It is not a blind march." - Mankutimma

Themes

Nature

Video Section

Video Coming Soon

Detailed video explanations by scholars and experts will be available soon.