Mankutimmana Kagga by D.V. Gundappa
ಬಲುಹಳೆಯ ಲೋಕವಿದು, ಬಲುಪುರಾತನಲೋಕ । ಬೆಳೆದಿರ್ಪುದಿದು ಕೋಟಿರಸಗಳನು ಪೀರ್ದು ॥ ಸುಲಭವಲ್ಲದರ ಸ್ವಭಾವವನು ಮಾರ್ಪಡಿಸೆ । ಸಲದಾತುರೆಯದಕೆ - ಮಂಕುತಿಮ್ಮ ॥ ೮೭೫ ॥
balu haLeya lOkavidu, balu purAtana lOka । beLedirpudu idu kOTi rasagaLanu pIrdu ॥ sulabhavalla adara svabhAvavanu mArpaDise । saladu aatureyu adake - Mankutimma ॥ 875 ॥
ಈ ಲೋಕ ಬಹಳ ಹಳೆಯದು, ಪುರಾತನವಾದದ್ದು. ಇದು ಅಂದಿನಿಂದ ಇಂದಿನವರೆಗೆ ಕೋಟಿ ಕೋಟಿ ರಸಗಳನ್ನು ಹೀರಿಕೊಂಡು ಬದಲಾಗಿದೆ. ಅದರ ಸ್ವಭಾವವನ್ನು ಸುಲಭದಲ್ಲಿ ಬದಲಾಯಿಸಲು ಸಾಧ್ಯವಿಲ್ಲ ಮತ್ತು ಅದನ್ನು ಬದಲಾಯಿಸಲು ಆತುರಪಡುವುದು ಸರಿಯಲ್ಲ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
"This world is very old. It is an ancient one. It has grown over the ages imbibing a lot of emotions (crores of them) and each of them have left deep stains on its culture. It is hence not easy to change its very nature. It does not like being hurried also. Change does happen, but very slowly." - Mankutimma
Video Coming Soon
Detailed video explanations by scholars and experts will be available soon.