Mankutimmana Kagga by D.V. Gundappa
ಮಡಕೆಯನು ಬಡಿದು ಹೊನ್ ಕೊಡವ ತೋರುವ ಸಖನೆ । ಪಡೆದಿಹೆಯ ರಹದಾರಿಯನು ಹೊನ್ನ ಗಣಿಗೆ? ॥ ಒಡಲಿಗೊಗ್ಗಿದ ನೀರ ಚೆಲ್ಲಿದೊಡದೇಂ ಪಾಲ । ಕುಡಿವ ಸಂತಸಕೆಣೆಯೆ? - ಮಂಕುತಿಮ್ಮ ॥ ೮೭೪ ॥
maDakeyanu baDidu honn koDava tOruva sakhane । paDediheya rahadAriyanu honna gaNige? ॥ oDalige oggida nIra chellidoDe adEm pAla । kuDiva santasake eNeye? - Mankutimma ॥ 874 ॥
ಮಣ್ಣಿನ ಮಡಿಕೆಯನ್ನು ಒಡೆದುಹಾಕಿ,’ ಓ!! ನಿನಗೆ ಬಂಗಾರದ ಮಡಿಕೆಯನ್ನು ಕೊಡುವೆ ‘ ಎಂದು ಹೇಳಲು ಬಂಗಾರದ ಗಣಿ ನಿನ್ನ ಬಳಿ ಇದೆಯೇನು? ದೇಹಕ್ಕೆ ಒಗ್ಗಿದ ನೀರನ್ನು ಚೆಲ್ಲಿ ಹಾಲನ್ನು ಕೊಟ್ಟರೂ ನೀರನ್ನು ಕುಡಿವ ಸಂತಸಕ್ಕೆ ಅದು ಸಮವೇನು? ಎಂದು ಸಂತಸದ ಮತ್ತು ತೃಪ್ತಿಯ ಸ್ವರೂಪದ ವಿಚಾರವನ್ನು ನಮ್ಮಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.
"Friend, you cannot break the mud pot with the promise to show a golden one. Have you got the license to mine gold so that you can show these dreams to people? If people are comfortable drinking water (which suits well to their body) then you should not ask them throw water away and get used to milk. Will they be happy doing so?" - Mankutimma
Video Coming Soon
Detailed video explanations by scholars and experts will be available soon.