Back to List

Kagga 873 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ । ಕುಲುಕಿ ಹಾಸಿಗೆಯನರಸೆನುವುದುಪಕೃತಿಯೆ? ॥ ಒಳಿತನೆಸಗುವೆನೆಂದು ನೆಮ್ಮದಿಯ ನುಂಗದಿರು । ಸುಲಭವಲ್ಲೊಳಿತೆಸೆಗೆ - ಮಂಕುತಿಮ್ಮ ॥ ೮೭೩ ॥

baLali neladali malagi mai maretu nidripana। kuluki hAsigeyanu arasu enuvudu upakRutiye? ॥ oLitanesaguvenendu nemmadiya nungadiru । sulabhavalla oLitesege - Mankutimma ॥ 873 ॥

Meaning in Kannada

ಯಾರೋ ಒಬ್ಬ ದುಡಿದು ಸುಸ್ತಾಗಿ, ನೆಲದಮೇಲೆ ಮಲಗಿ ನಿದ್ರಿಸುತ್ತಿರುವವನನ್ನು ಅಲುಗಾಡಿಸಿ, ಎಬ್ಬಿಸಿ, ಹಾಸಿಗೆಯನ್ನು ಹುಡುಕಿಕೊಂಡು ಮಲಗಿಕೋ ಎಂದು ಹೇಳುವುದು ಉಪಕಾರವೇನು? ಉಪಕಾರಮಾಡುವೆ ಎಂದು ಪರರ ನೆಮ್ಮದಿಯನ್ನು ಕಸಿಯಬೇಡ. ಮತ್ತೊಬ್ಬರಿಗೆ ಒಳಿತನ್ನು ಮಾಡುವುದು ಅಷ್ಟು ಸುಲಭವಲ್ಲ ಎಂದು ಪರರಿಗುಪಕರಿಸುವ ಪರಿಯನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Is it called helping when you wake up a tired person sleeping happily on the floor to send him searching for a bed to sleep on? With the intension of helping, one must not disturb the peace and happiness of someone. It is not easy to do good." - Mankutimma

Themes

DeathMoralitySocietyPeace

Video Section

Video Coming Soon

Detailed video explanations by scholars and experts will be available soon.