Back to List

Kagga 872 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಗುಡಿಸಲೇನೊಣಹುಲ್ಲು ಕಡ್ಡಿ ಮಣ್ಣೆನ್ನುತಲಿ । ಬಡವನಲಿ ಕೊರತೆಗಳ ನೆಡುವುದರಿದಲ್ಲ ॥ ಕೆಡಿಸಿದಾ ಗುಡಿಸಿಲಿನ ನೆಮ್ಮದಿಯ ಮತ್ತೆಂತು । ಕೊಡಲಹುದವಂಗೆ ನೀಂ? - ಮಂಕುತಿಮ್ಮ ॥ ೮೭೨ ॥

guDisalu Enu oNa hullu kaDDi maNNu annutali । baDavanali korategaLa neDuvudu aridalla ॥ keDisidA guDisilina nemmadiya mattentu । koDalahudavange nIm? - Mankutimma ॥ 872 ॥

Meaning in Kannada

ಗುಡಿಸಲನ್ನು ‘ ಅದೇನು ಮಹಾ!!! ಒಣಹುಲ್ಲಿನಿಂದ, ಕಡ್ಡಿ ಮಣ್ಣಿನಿಂದ’ ಕಟ್ಟಿರುವುದು ಎಂದು ತಾತ್ಸಾರದಿಂದ ಅದರಲ್ಲಿ ವಾಸಿಸುವ ಬಡವನನ್ನು ಹೀನಾಯವಾಗಿ ಕಂಡು ಆ ಗುಡಿಸಲನ್ನು ಕೆಡವಿ ಕೆಡಿಸಿದರೆ, ಆ ಗುಡಿಸಿಲಿನಲ್ಲೇ ಅವನಿಗೆ ಸಿಗುತ್ತಿದ್ದ ನೆಮ್ಮದಿಯನ್ನು, ಮತ್ಯಾವುದರಿಂದಲಾದರೂ, ಅವನಿಗೆ ಕೊಡಲಾಗುತ್ತದೆಯೇ? ಎಂದು, ಅವರವರ ಸುಖ ಸಾಧನ ಅವರವರಿಗೆ ಸೂಕ್ತ ಎನ್ನುವಂತಹ ಸೂತ್ರವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"A hut is nothing more than a few dried straw a few sticks. It is very easy to plant such thoughts in the minds of people who are happily living in the hut. It is easy to make them feel miserable with their present state and wish for more. You would have disturbed the peace and happiness in that household. How are you planning to give it back?" - Mankutimma

Themes

LifeSocietyPeace

Video Section

Video Coming Soon

Detailed video explanations by scholars and experts will be available soon.