Back to List

Kagga 871 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಆರಿಗಾವುದು ತಕ್ಕುದಾರಿಗಾವುದು ದಕ್ಕ- । ದೀ ರಹಸ್ಯದಿನಾದ ಸಾಹ್ಯವುಪಕಾರ ॥ ತಾರತಮ್ಯವಿವೇಕವರಿಯದಾ ಸಂಸ್ಕಾರ । ಪ್ರೇರಕವೊ ಚೌರ್ಯಕ್ಕೆ - ಮಂಕುತಿಮ್ಮ ॥ ೮೭೧ ॥

aarigAvudu takkudu aarigAvudu dakkadu । E rahasyadin aada sAhyavupakAra ॥ tAratamya vivEkava ariyada samskAra । prErakavo chauryakke - Mankutimma ॥ 871 ॥

Meaning in Kannada

ಯಾರು ಯಾರಿಗೆ ಏನು ತಕ್ಕುದ್ದೋ ಅವರವರಿಗೆ ಅದು ದಕ್ಕುತ್ತದೆ. ಆದರೆ ಯಾರಿಗೆ ಏನು ಸೂಕ್ತವಾದದ್ದು ಮತ್ತು ಯಾರಿಗೆ ಏನು ದಕ್ಕುತ್ತದೆ ಎನ್ನುವುದು ರಹಸ್ಯವಾಗಿರುವುದು. ಆ ರಹಸ್ಯವನ್ನು ಅರಿತರೆ ನಮಗೆ ಉಪಕಾರವಾಗುತ್ತದೆ. ನಾವು ಬಯಸಿದ್ದು ಮತ್ತು ನಾವು ಪಡೆದಿದ್ದರ ನಡುವಿನ ಅಂತರವನ್ನು ಅರಿತರೆ ಸಂಸ್ಕಾರ ಬೆಳೆಯುತ್ತದೆ. ಹಾಗೆ ಅರಿಲಾಗದಿದ್ದರೆ, ನಮಗೆ ಸಿಗದ ವಸ್ತುವನ್ನು ಪಡೆಯಲು ಕಳ್ಳತನಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ, ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Who deserves what? Who should not get what? One must make an attempt to learn this secret. There are multiple uses of this knowledge of rightly assigning causes for events and thereby determining the deservedness of people. If one does not understand it properly, then it will only encourage stealing." - Mankutimma

Themes

WisdomMoralitySociety

Video Section

Video Coming Soon

Detailed video explanations by scholars and experts will be available soon.