Mankutimmana Kagga by D.V. Gundappa
ದಿವಿಜಸುಧೆ ಬರಿಮಧುವೊ; ಹುಳಿಯುಪ್ಪು ಮಿಶ್ರಿತವೊ? । ಅವನಿಯುಣಿಸಿನಲಿ ಷಡ್ರಸ ತಪ್ಪದಿಹುದು ॥ ಲವಲೇಶಮಾನುಮಿರದಿರೆ ಕಯ್ಪು ಜೀವನದಿ । ಪವಳಿಸಿರನೇ ನರನು? - ಮಂಕುತಿಮ್ಮ ॥ ೮೭೦ ॥
divijasudhe barimadhuvo; huLi uppu mishritavo? । avaniya uNisinali ShaD rasa tappade ihudu ॥ lavalEsham aanum iradire kaypu jIvanadi । pavaLisiranE naranu? - Mankutimma ॥ 870 ॥
ದೇವಲೋಕದ ಅಮೃತ ಬರೀ ಸಿಹಿಯೋ ಹುಳಿಯುಪ್ಪುಮಿಶ್ರಿತವೋ?, ಗೊತ್ತಿಲ್ಲ. ಆದರೆ ಭೂಮಿಯ ಆಹಾರದಲ್ಲಿ ಷಡ್ರಸಗಳು ತಪ್ಪದೆ ಇರುವುದು. ಬದುಕಿನ ಅನುಭವದಲ್ಲಿ ಎಲ್ಲವೂ ಸವಿಯಾಗಿ ಸ್ವಲ್ಪವಾದರೂ ಕಹಿ ಇರದೇ ಇದ್ದರೆ, ಮನುಷ್ಯ ಸದಾ ಮಲಗಿ ನಿದ್ರಿಸದೆ ಇರುವುದ್ದಿಲ್ಲವೇ? ಎಂದು ಪ್ರಶ್ನಿಸುತ್ತಾ ಮಿಶ್ರ ಅನುಭವಗಳ ಸೂಕ್ತತೆಯನ್ನು ಮತ್ತು ಅವಶ್ಯಕತೆಯನ್ನೂ ಸಹ ಅರುಹಿದ್ದಾರೆ ಮಾನ್ಯ ಗುಂಡಪ್ಪನವರುಈ ಮುಕ್ತಕದಲ್ಲಿ.
"About the elixir that the Gods drink - is it all sweet or has traces of sour and salt? In the food of this world, there is definitely a mixture of all six tastes. If there is absolutely not bitterness - not even an grain of it, then man would spend his entire life sleeping. Isn't it?" - Mankutimma
Video Coming Soon
Detailed video explanations by scholars and experts will be available soon.