Mankutimmana Kagga by D.V. Gundappa
ಮಾರ್ಗಣೆಯೆ ಮುಖ್ಯ; ಲಭ್ಯದ ಮಾತದಂತಿರಲಿ । ಸ್ವರ್ಗವನು ಭುವಿಗಿಳಿಸಬಲ್ಲವನದಾರು? ॥ ಅರ್ಗಲ ವಿಹೀನ ಸರ್ವಾರ್ಥ ಸಹಭಾಗಿತೆಯೆ । ಅರ್ಘಾರ್ಹತತ್ತ್ವವೆಲೊ - ಮಂಕುತಿಮ್ಮ ॥ ೮೬೯ ॥
mArganeye mukhya; labhyada mAtadu antirali । svargavanu bhuvige iLisa ballavanu adAru? ॥ argala vihIna sarvArtha sahabhAgiteye । arghArha tatvavelo - Mankutimma ॥ 869 ॥
ಎಲ್ಲರೂ ಎಲ್ಲಾ ಕಾಲಕ್ಕೂ ಸುಖದ ಸಾಧನಗಳನ್ನು ಹುಡುಕುವುದೇ ಮುಖ್ಯ. ಅದರಿಂದ ಏನು ಸಿಕ್ಕಿತು ಅಥವಾ ಇಲ್ಲ ಎನ್ನುವ ಮಾತು ಒತ್ತಟ್ಟಿಗಿರಲಿ. ಎಲ್ಲಾ ಸುಖಗಳ ತಾಣವಾದ ಸ್ವರ್ಗವನು ಈ ಭೂಮಿಯಮೇಲೆ ತರಬಲ್ಲವನು ಯಾರು? ಜಗತ್ತಿನಲ್ಲಿರುವ ಸುಖಸಾಧನಗಳನ್ನು, ಅಬಾಧಿತವಾಗಿ ಅಡೆತಡೆಯಿಲ್ಲದೆ ಸಮಾನವಾಗಿ ಎಲ್ಲರೂ ಹಂಚಿಕೊಂಡು ಬಾಳುವುದೇ ಅತ್ಯುತ್ತಮ ತತ್ವ ಎನ್ನುತ್ತಾರೆ, ಸನ್ಮಾನ್ಯ ಗುಂಡಪ್ಪನವರು.
"Searching (striving) for the answer is important. Not the result. What one gets finally is a different matter altogether. Is there a person who can claim that he can get heaven to earth? It is enough if one can find a acceptable solution without obstacles that involves everyone sharing and caring about each other. That is nothing short of heaven and is the great ideal to live by." - Mankutimma
Video Coming Soon
Detailed video explanations by scholars and experts will be available soon.