Back to List

Kagga 868 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅರೆದಿನದ ನಮ್ಮ ಯತ್ನದಿನದೇನೆನ್ನದಿರು । ಕಿರಿದುಮೊಡಗೂಡಿರಲು ಸಿರಿಯಹುದುಬಾಳ್ಗೆ ॥ ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ? । ಕಿರುಜಾಜಿ ಸೊಗಕುಡದೆ? - ಮಂಕುತಿಮ್ಮ ॥ ೮೬೮ ॥

aredinada namma yatnadin adEnu ennadiru । kiridum oDagUDiralu siriyahudu bALge ॥ paripOShisade ninna oDala dAri marada phala । kiru jAji sogakuDade? - Mankutimma ॥ 868 ॥

Meaning in Kannada

‘ನಮ್ಮದು ಅಲ್ಪ ಪ್ರಯತ್ನ, ಇದರಿಂದ ಏನಾಗಬಹುದು ಮಹಾ’ ಎನ್ನುವ ಭಾವ ಬೇಡ. ಏಕೆಂದರೆ ಚಿಕ್ಕ ಚಿಕ್ಕ ಸಾಧನೆಗಳಿಂದಲೇ ಬಾಳು ಸಂವೃದ್ಧವಾಗುತ್ತದೆ. "ಸಾಲುಮರಗಳು ನಮಗೆ ನೆರಳನ್ನು ನೀಡುವುದಿಲ್ಲವೇ? ಜಾಜಿಯ ಹೂವು ಸಣ್ಣದಾದರೂ ಸುಗಂಧವನ್ನು ನೀಡುವುದಿಲ್ಲವೇ?" ಎಂದು ಜಗತ್ತಿನಲ್ಲಿ ನಮ್ಮ ಕಿಂಚಿತ್ ಕೃತಿಯಿಂದಲೂ ಬಾಳಿಗೆ ಒಂದು ಅರ್ಥವನ್ನು ಕಂಡುಕೊಳ್ಳಬಹುದು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Don't think that your small efforts of half a day will not do any impact. When such small efforts all come together, then life becomes beautiful. Doesn't the small fruit from a tree on the path quench your hunger a bit? Is the small jaaji (variety of jasmine) with mild fragrance not capable of giving you " - Mankutimma

Themes

LifeNature

Video Section

Video Coming Soon

Detailed video explanations by scholars and experts will be available soon.