Mankutimmana Kagga by D.V. Gundappa
ಯತನ ಕರ್ತವ್ಯವದು, ನಮಗೆ ವಿದ್ಯಾಭ್ಯಾಸ । ಹಿತಪರಿಜ್ಞಾನ ಯತ್ನಾನುಭವ ಫಲಿತ ॥ ಸತತಯತ್ನದಿನಾತ್ಮ ಶಕ್ತಿ ಪರಿವರ್ಧಿಪುದು । ಯತನ ಜೀವನಶಿಕ್ಷೆ - ಮಂಕುತಿಮ್ಮ ॥ ೮೬೭ ॥
yatana kartavyavadu, namage vidyAbhyAsa । hita parijnAna yatnAnubhava phalita ॥ satata yatnadin aatma shakti parivardhipudu । yatana jIvana shikShe - Mankutimma ॥ 867 ॥
ಪ್ರಯತ್ನಪಡುವುದು ಕರ್ತವ್ಯ. ಅದು ನಮಗೆ ಅದೊಂದು ಕಲಿಕೆಯ ಮಾರ್ಗ. ಹಿತವಾದ ಪರಿಜ್ಞಾನದ ವೃದ್ಧಿಯೇ, ಪ್ರಯತ್ನದ ಅನುಭವದಿಂದ ಸಿಗುವ ಫಲಿತ. ಬದುಕಿನಲ್ಲಿ ಸತತವಾದ ಪ್ರಯತ್ನದಿಂದ ಆತ್ಮಶಕ್ತಿಯ ವೃದ್ಧಿಯಾಗುವುದು. ಸತತವಾಗಿ ಪ್ರಯತ್ನವನ್ನು ಪಡುವುದೇ ಜೀವನದಲ್ಲಿ ಶಿಕ್ಷೆಯಂತೆ ಎನ್ನುತ್ತಾರೆ ಡಿವಿಜಿಯವರು ಈ ಮುಕ್ತಕದಲ್ಲಿ.
"To try is our duty. Only when one tries, he learns. He will know what is good for himself. This knowledge is the fruit of trying. Only when you try often and be persevere will the soul grow in strength. To try is the only way to get educated." - Mankutimma
Video Coming Soon
Detailed video explanations by scholars and experts will be available soon.