Mankutimmana Kagga by D.V. Gundappa
ಆತುಮದ ಸಂಸ್ಥಿತಿಗೆ ದೈಹಿಕಸಮಾಧಾನ; । ಭೌತವಿಜ್ಞಾನದಾ ರಾಷ್ಟ್ರ ಸಂಸ್ಥೆಗಳಾ ॥ ನೂತನ ವಿವೇಕಪ್ರಯೋಗಗಳಿನಾದೀತು । ಭೂತಿಸಂಪದ ಜಗಕೆ - ಮಂಕುತಿಮ್ಮ ॥ ೮೬೬ ॥
aatumada samsthitige daihika samaadhAna । bhautavijnAnadaa rAShTra samsthegaLA ॥ nUtana viveka prayogagaLin aadItu । bhUti sampada jagake - Mankutimma ॥ 866 ॥
ಆತ್ಮದ ಸುಸ್ಥಿತಿಗೆ ದೇಹ ಸಮಾಧಾನವಾಗಿರಬೇಕು. ಭೌತಿಕ ವಿಜ್ಞಾನದ ಪ್ರಯೋಗಗಳಿಂದ, ಹೊಸ ಹೊಸ ಸಾಧನಗಳನ್ನು ಕಂಡುಹಿಡಿಯುತ್ತಾ ರಾಷ್ಟ್ರಗಳು ಮತ್ತು ಆ ರಾಷ್ಟ್ರಗಳಲ್ಲಿನ ಸಂಸ್ಥೆಗಳು ಸಂಪತ್ತನ್ನು ಸೃಷ್ಟಿಸಿ ಜನರ ಸುಖಸಾಧನಗಳಾಗಿಸುತ್ತಾರೆ ಎಂದು, ಜಗತ್ತಿನಲ್ಲಿ ಮನುಷ್ಯನ ‘ ಸುಖಸಾಧನಗಳ ‘ ಹುಡುಕುವಿಕೆಯ ಮತ್ತೊಂದು ಆಯಾಮವನ್ನು ಪರಿಚಯಿಸಿದ್ದಾರೆ ಮಾನ್ಯ ಗುಂಡಪ್ಪನವರು ಮುಕ್ತಕದಲ್ಲಿ.
"For the soul to be happy, it must reside in a healthy happy body. All the advances in science, organizations and nations with their latest inventions and discoveries will make living in this world prosperous." - Mankutimma
Video Coming Soon
Detailed video explanations by scholars and experts will be available soon.