Back to List

Kagga 88 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ । ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ ॥ ಥಳಥಳಕೆ ವಜ್ರದಲಿ ನೈಜವಿರುವಂತೆಯು । ಜ್ಜ್ವಲತೆ ಬೊಮ್ಮಗೆ ನೈಜ - ಮಂಕುತಿಮ್ಮ ॥ ೮೮ ॥

chalane vishvAstaraNeyaduve mAyAbhramaNe । sale bageyaladu parabrahma visphuraNe ॥ thaLathaLake vajradali naijaviruvanteyu । ujjvalate bommage naija - Mankutimma ॥ 88 ॥

Meaning in Kannada

ನಿರಂತರ ಚಲನೆಯಲ್ಲಿರುವ ಈ ಜಗತ್ತು ಮತ್ತು ಅದರ ವಿಸ್ತಾರದ ವಿಚಾರ ನಮ್ಮನ್ನು ಭ್ರಮಾಲೋಕಕ್ಕೆ ತಳ್ಳುತದೆ. ಅದನ್ನು ಕೂಲಂಕುಷವಾಗಿ ವಿಚಾರಮಾಡಿ ನೋಡಿದರೆ ಎಲ್ಲೆಲ್ಲೂ ಸಹಜ ಪ್ರಕಾಶದಿಂದ ಪ್ರಾಜ್ವಲ್ಯಮಾನವಾಗಿರುವ ಆ ಪರಮಾತ್ಮ ದರ್ಶನವಾಗುತ್ತದೆ. ಏಕೆಂದರೆ ವಜ್ರಕ್ಕೆ ಹೇಗೆ ಪ್ರಕಾಶವು ಸಹಜ ಗುಣವೋ ಹಾಗೆಯೇ ಆ ಪರಮಾತ್ಮನೂ ತನ್ನದೇ ಪ್ರಕಾಶದಿಂದ ಹೊಳೆಯುತ್ತಿದ್ದಾನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

This universe is ever moving and expanding or so it feels. If one goes to the root of this, you will only see the brilliance of the Creator. To be raidiant is the innate quality of a diamond. To be brilliant is a innate quality of the Creator. - Mankutimma

Themes

Nature

Video Section

Video Coming Soon

Detailed video explanations by scholars and experts will be available soon.