Mankutimmana Kagga by D.V. Gundappa
ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿ । ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ॥ ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ । ವಿಲಸಿತವು ಬೊಮ್ಮನದು - ಮಂಕುತಿಮ್ಮ ॥ ೮೭ ॥
beLe hoLapu vikasana vikAra saMbhramagaLali । beLaku vEgagaLenipa kAla dikkugaLa ॥ chalaneyali vishvasammOhanagaLu ellavu A । vilasitavu bommanadu - Mankutimma ॥ 87 ॥
ವಿಶ್ವದ ಎಲ್ಲಕ್ಕೂ ಒಂದು ನಿಗಧಿತ ಚಲನೆ ಉಂಟು. ಆ ಚಲನೆಗೆ ಕಾರಣ ಚೇತನ. ಆ ಬೃಹತ್ ಚೇತನದ ಒಂದು ಅಂಶವೇ ಎಲ್ಲಕ್ಕೂ ಚೇತನದ ಮೂಲ. ಒಂದು ಸಣ್ಣ ಬತ್ತದ ಕಾಳು ಭೂಮಿಗೆ ಬಿದ್ದಾಗ, ನೆಲ, ನೀರು, ಬೆಳಕು, ಸೂರ್ಯನ ಶಾಖಗಗಳ ಸಂಪರ್ಕಕ್ಕೆ ಬಂದಾಗ ಮೊಳಕೆಯೊಡೆದು ಸಸಿಯಾಗಿ ತೆನೆಯೋಡೆದು ಒಂದು ಇದ್ದದ್ದು ಹಲವಾಗಿ ಮತ್ತೆ ಮತ್ತೊಂದು ಸೃಷ್ಟಿ ಚಕ್ರಕ್ಕೆ ನಾಂದಿ ಹಾಡುತ್ತದೆ. ಅದಾವ ಶಕ್ತಿ ಆ ಒಂದು ಕಾಳನ್ನು ಮೊಳೆಸಿ ಆ ಭೂಮಿಯಿಂದ ಸತ್ವವನ್ನು ಹೀರಿ ಆ ಸಣ್ಣ ಸಸಿಯ ನರ ನಾಡಿಗಳಿಂದ ಶಿಖರಕ್ಕೆ ತಂದು ಕಿರೀಟದಂತೆ ಆ ತೆನೆಯನ್ನು ತೊಯ್ದಾಡಿಸುತ್ತದೆ. ಎಂತಹ ಅದ್ಭುತ. ಆ ಜಗತ್ತಿನ ಸೃಷ್ಟಿಯೆಲ್ಲವೂ ಅಂತಹ ಅದ್ಭುತಗಳಿಂದಲೇ ತುಂಬಿದೆ.
In growth, in brilliance, in expansion, in ugliness, in happiness, in measuring and knowing the speed of light, in identifying the directions, in feeling the movement of this world one can see illusions that are created by him for his own enjoyment. - Mankutimma
Video Coming Soon
Detailed video explanations by scholars and experts will be available soon.