Back to List

Kagga 861 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ದಿವ್ಯ ಚರಿತಂಗಳ ಪ್ರತ್ಯುಕ್ತಿ ನರಚರಿತೆ । ಕಾವ್ಯ ವಿಜ್ಞಾನಗಳ್ ನಿಗಮಾನುಸರಗಳ್ ॥ ನವ್ಯಸಂಪದವಾರ್ಷಸಂಪದುದ್ಧೃತವಿಂತು । ಸವ್ಯಪೇಕ್ಷಗಳುಭಯ - ಮಂಕುತಿಮ್ಮ ॥ ೮೬೧ ॥

divya charitangaLa pratyukti nara charite । kAvya vijnAnagaL nigama anusAragaL ॥ navya sampadavu aarSha sampada uddhRutavu intu । savya apEkShegaLu ubhaya - Mankutimma ॥ 861 ॥

Meaning in Kannada

ಇಂದಿನ ಮನುಷ್ಯರ ಜೀವನ ಹಿಂದಿನ ದಿವ್ಯಪುರುಷರ ಮಹೋನ್ನತವಾದ ನಡವಳಿಕೆಯ ಪ್ರತಿಬಿಂಬದಂತಿದೆ. ಇಂದಿನ ಕಾವ್ಯ ಮೀಮಾಂಸೆಗಳು ನಿಗಮವನ್ನು ಅನುಸರಿಸಿಯೇ ಬರೆಯಲ್ಪಟ್ಟಿದೆ . ಇಂದಿನ ಸಕಲ ಸಂಪತ್ತೂ ಋಷಿಮುನಿಗಳು ಮತ್ತು ನಮ್ಮ ಪೂರ್ವಜರ ಬದುಕಿನ ಮೇಲೆ ಸಮಗ್ರವಾಗಿ ಬೆಳೆದು ನಿಂತಿದೆ. ಹೀಗೆ ನವೀನ ಮತ್ತು ಪುರಾತನಗಳೆರಡೂ ಪರಸ್ಪರಾಧಾರಪಟ್ಟಿವೆ ಎಂದು ಜಗತ್ತಿನಲ್ಲಿ ಬದಲಾಗುತ್ತಿರುವ ಸ್ಥಿತಿಯನ್ನು, ಮಾನ್ಯ ಗುಂಡಪ್ಪನವರು ವಿಶ್ಲೇಷಿಸಿದ್ದಾರೆ, ಈ ಮುಕ್ತಕದಲ್ಲಿ.

Meaning & Interpretation

"Human story is nothing more than a retelling of the past. Poetry and Science are following the same rules of the universe. New culture is only an excerpt of the old ones. The new and old grow depending on each other. The old needs the new to keep themselves alive and the new needs old to take form." - Mankutimma

Themes

DeathNature

Video Section

Video Coming Soon

Detailed video explanations by scholars and experts will be available soon.