Mankutimmana Kagga by D.V. Gundappa
ಸೃಷ್ಟಿ ಚೋದನೆಗಳಿಂ ನರನೊಳಿಷ್ಟಗಳುದಯ- । ವಿಷ್ಟಸಿದ್ದಿಗೆ ಯಂತ್ರತಂತ್ರಗಳ ಯುಕ್ತಿ ॥ ತ್ವಷ್ಟೃಕುಶಲದೆ ಸೃಷ್ಟಿ ವಿಕೃತಿ; ಇಂತನ್ಯೋನ್ಯ । ಸ್ಪೃಷ್ಟರ್ ಪ್ರಕೃತಿ ನರರು - ಮಂಕುತಿಮ್ಮ ॥ ೮೬೦ ॥
sRuShTi chodanegaLim naranoL iShTagaLa udayavu । iShTasiddhige yantra tantragaLa yukti ॥ tvaShTRu kushalade sRuShTi vikRuti; intu anyOnya । spRuShTar prakRuti nararu - Mankutimma ॥ 860 ॥
ಮನುಷ್ಯನ ಮನಸ್ಸಿನಲ್ಲಿ ಉದ್ಭವವಾಗುವ ಆಸೆಗಳು ಸೃಷ್ಟಿಯ ಪ್ರೇರಣೆ ಮತ್ತು ಪ್ರಚೋದನೆಯಿಂದಲೇ ಆಗುತ್ತದೆ. ಹಾಗೆ ಉದ್ಭವವಾದ ಅವನ ಇಷ್ಟಗಳನ್ನು ಪೂರೈಸಿಕೊಳ್ಳಲು ಸಾಧನಗಳನ್ನೂ ಪ್ರಕೃತಿಯೇ ನಿರ್ಮಿಸಿದೆ. ಆ ಸಾಧನಗಳನ್ನು ಉಪಯೋಗಿಸಿಕೊಂಡು ಮನುಷ್ಯ, ತಂತ್ರ ಮತ್ತು ಯುಕ್ತಿಗಳಿಂದ ತನ್ನ ಇಷ್ಟಗಳನ್ನು ಪೂರೈಸಿಕೊಳ್ಳುತ್ತಾನೆ. ಹೀಗೆ ಸೃಷ್ಟಿಕರ್ತನ ಕುಶಲತೆಯಿಂದಲೇ ಮಾನವನ ಮೂಲಕ ಸೃಷ್ಟಿ ವಿಕೃತಗೊಳ್ಳುತ್ತದೆ. ಹೀಗೆ ಪ್ರಕೃತಿ ಮತ್ತು ಮಾನವರ ಸಂಬಂಧ ಅನ್ಯೋನ್ಯವಾಗಿದೆ ಎಂದು ಮನುಷ್ಯ ಮತ್ತು ಪ್ರಕೃತಿಯ ಸಂಬಂಧವನ್ನು ಗುಂಡಪ್ಪನವರು ಈ ಮುಕ್ತಕದಲ್ಲಿ ಉಲ್ಲೇಖಿಸಿದ್ದಾರೆ .
"nature provokes man with desires. To satisfy this desire, he creates machines and mechanisms with his intellect. By the grace of this divine sculptor (through his energy residing in man) nature is altered now and then. This leads to the repeat of the cycle. Nature and mankind thus have an symbiotic relation." - Mankutimma
Video Coming Soon
Detailed video explanations by scholars and experts will be available soon.