Mankutimmana Kagga by D.V. Gundappa
ಪ್ರಕೃತಿಯನವರತ ಮನುಜನ ತಿದ್ದುತಿರುವಂತೆ । ವಿಕೃತಿಗೊಳಿಸುವನವನುಮ್ ಆಕೆಯಂಗಗಳ ॥ ಭೂಕೃಷಿಕ ರಸತಂತ್ರಿ ಶಿಲ್ಪಿ ವಾಹನಯಂತ್ರಿ । ವ್ಯಾಕೃತಿಸರೇನವಳ? - ಮಂಕುತಿಮ್ಮ ॥ ೮೫೯ ॥
prakRutiyu anavarata manujana tiddutiruvante । vikRuti goLisuvanu avanum aakeya angagaLa ॥ bhUkRuShika rasatantri shilpi vAhanayantri । vyAkRutisarEnu avaLa? - Mankutimma ॥ 859 ॥
ಪ್ರಕೃತಿ ನಿರಂತರವಾಗಿ ಮನುಷ್ಯನನ್ನು ತಿದ್ದುತ್ತಿರುವಂತೆಯೇ, ಮನುಷ್ಯ ಪ್ರಕೃತಿಯನ್ನು ವಿರೂಪಗೊಳಿಸುತ್ತಾನೆ. ಭೂಮಿಯನ್ನು ಕೃಷಿ ಮಾಡುವವನು, ಭೂ ಗರ್ಭದಿಂದ ರಾಸಾಯನಿಕಗಳನ್ನು, ಅದಿರುಗಳನ್ನು ಶೋಧಿಸುವವನು, ಲೋಹ ಮತ್ತು ಕಲ್ಲುಗಳಿಂದ ಶಿಲ್ಪಗಳನ್ನು ಮಾಡುವವನು, ತನ್ನ ಯಾತ್ರೆಗಾಗಿ ವಾಹನಗಳನ್ನು ತಯಾರುಮಾಡುವವನು ಎಲ್ಲರೂ ಈ ಪ್ರಕೃತಿಯನ್ನು ವಿಕೃತ ಗೊಳಿಸುವುದಿಲ್ಲವೇನು? ಎಂದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಪರಸ್ಪರ ಸಂಬಂಧವನ್ನು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Nature always exerts enough force to correct man's course. On his part, man always tries to shape nature to his advantage/liking. A farmer, a metallurgist, a sculptor, an automobile engineer - Aren't they all exerting force to change nature?" - Mankutimma
Video Coming Soon
Detailed video explanations by scholars and experts will be available soon.