Back to List

Kagga 858 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪ್ರಿಯಹಿತಗಳನ್ವೇಷೆಯಿಂ ಕರ್ಮಪರಿಪೋಷೆ । ಕ್ರಿಯೆಯ ಪಾರಂಪರ್ಯ ಜನ್ಮಾಂತರೀಯ ॥ ನಿಯತವಿಂತು ಜಗತ್ಪ್ರವರ್ಧನೆಗೆ ನರತೃಷ್ಣೆ । ಜಯ ಪೂರ್ಣವೆಂದದಕೆ? - ಮಂಕುತಿಮ್ಮ ॥ ೮೫೮ ॥

priya hitagala anvESheyim karma paripOShe । kriyeya pAramparya janmAntarIya ॥ niyataviMtu jagat pravardhanege naratRuShNe । jaya pUrNavendadake - Mankutimma ॥ 858 ॥

Meaning in Kannada

ತನಗೆ ಪ್ರಿಯ ಮತ್ತು ಹಿತವಾದದ್ದನ್ನು ಹುಡುಕುವ ಮನುಷ್ಯನ ಕರ್ಮಗಳ ನಿರಂತರ ಪೋಷಣೆ, ಪರಂಪರಾನುಗತವಾಗಿ, ಜನ್ಮಜನ್ಮಾಂತರಗಳಿಂದ ನಡೆಯುತ್ತಿದೆ. ವಿಧಿ ಅಥವಾ ವಿಧಾತ ತನ್ನ ಈ ಜಗತ್ತಿನ ವರ್ಧನೆಗಾಗಿಯೇ ನರನ ಮನಸ್ಸಿನಲ್ಲಿ ಬಯಕೆಗಳನ್ನು ಹುಟ್ಟಿಸುತ್ತದೆ(ತ್ತಾನೆ). ಈ ಬಯಕೆಗಳು ಮತ್ತು ಅವುಗಳ ಪೂರೈಕೆಗೆ ನಡೆಯುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿರುವುದರಿಂದ, ‘ಅವನಿಗೆ ಸಂಪೂರ್ಣ ಜಯ ಎಂದು ಸಿಗುವುದೋ’ ಎಂದು ಒಂದು ಅದ್ಬುತ ವಿಚಾರವನ್ನು ನಮ್ಮ ಮುಂದೆ ಇಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"To find happiness, we do work - actions. The consequences of actions are accumulated beyond the present lives. This is the rule that the world runs on. The main source of development in this world is the human desire. But does it every have victory or an end?" - Mankutimma

Themes

LifeDeathDuty

Video Section

Video Coming Soon

Detailed video explanations by scholars and experts will be available soon.