Back to List

Kagga 857 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸತತಮಾರ್ಗಣೆ, ಸಿದ್ಧಿಯಂತಿರಲಿ, ಮಾರ್ಗಣೆಯೆ । ಗತಿ ಮನುಜಲೋಕಕ್ಕೆ ; ಜಗದ ಜೀವವದು ॥ ಕೃತಕಾಮರೆಲ್ಲರಾದೊಡೆ ಕೃತ್ಯವುಳಿಯದೊಡೆ । ಕಥೆಮುಗಿವುದಲ ಜಗಕೆ? - ಮಂಕುತಿಮ್ಮ ॥ ೮೫೭ ॥

satata mArgane, siddhiyantirali, mArgaNeye । gati manujalOkakke; jagada jIvavadu ॥ kRutkAmaru ellarAdoDe kRutyavu uLiysdoDe । kathe mugivudela jagake? - Mankutimma ॥ 857 ॥

Meaning in Kannada

ಮನುಜ ಲೋಕದಲ್ಲಿ,’ಸರ್ವಹಿತ ಅಥವಾ ಸರ್ವಸುಖ’ ವನ್ನು ಸಾಧಿಸುವ ವಿಚಾರವನ್ನು ಮುಂದುವರೆಸುತ್ತಾ, ಅದನ್ನು ಸಾಧಿಸುವುದಿರಲಿ, ಅದರ ನಿರಂತರ ಹುಡುಕಾಟವೇ ಮನುಜ ಲೋಕಕ್ಕೆ ಉಳಿದಿರುವ ಗತಿ. ಏಕೆಂದರೆ, ಎಲ್ಲರೂ ತಮಗೆ ಬೇಕಾದುದೆಲ್ಲ ಸಿಕ್ಕಿದೆ, ಮತ್ತೇನೂ ಆಸೆಯಿಲ್ಲ, ಹಾಗಾಗಿ ನಮಗಿನ್ನೇನೂ ಮಾಡಲು ಉಳಿದಿಲ್ಲ ಎಂದು ಯೋಚಿಸಿಬಿಟ್ಟರೆ, ಜಗತ್ತಿನ ಕಥೆಯೇ ಮುಗಿದು ಹೋಗುವುದಲ್ಲ. ಹಾಗಾಗಿ ನಾವು ಬಯಸುವ ‘ ಸರ್ವಹಿತ ಅಥವಾ ಸರ್ವಸುಖ’ ದ ಸ್ಥಿತಿ ಈ ಜಗತ್ತಿನಲ್ಲಿ ಬರುವುದೇ ಇಲ್ಲ ಎಂದು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Let the constant endeavor be an end by itself. Action is a savior of mankind. it is the life of this world. If everyone in this world magically became satisfied and there is nothing left to do - wouldn't it be the end of story for this world?" - Mankutimma

Themes

LifeDeathSelf

Video Section

Video Coming Soon

Detailed video explanations by scholars and experts will be available soon.