Mankutimmana Kagga by D.V. Gundappa
ರಾಮಕಾರ್ಮುಕ, ಕೃಷ್ಣಯುಕ್ತಿ, ಗೌತಮಕರುಣೆ । ಭೂಮಿಭಾರವನಿಳುಹೆ ಸಾಲದಾಗಿರಲು ॥ ಸಾಮಾನ್ಯರೆನಿತು ತಾಂ ಪೆಣಗಿದೊಡಮೇನಹುದು? । ಕ್ಷೇಮವೆಂದುಂ ಮೃಗ್ಯ - ಮಂಕುತಿಮ್ಮ ॥ ೮೫೬ ॥
rAmakArmuka, kRuShNa yukti, gautama karuNe । bhUmi bhAravanu iLuhe sAladAgiralu ॥ sAmAnyaru enitu tAm peNagidoDam Enahudu? । kShEmavendu mRugya - Mankutimma ॥ 856 ॥
ರಾಮನ ಬಿಲ್ಲು, ಕೃಷ್ಣನ ಯುಕ್ತಿ, ಗೌತಮನ ಕಾರುಣ್ಯಗಳು ಈ ಭೂ ಭಾರವನ್ನಿಳಿಸಲು ಸಾಲದಾಗಿರಲು ಸಾಮಾನ್ಯ ಮನುಷ್ಯರು ಎಷ್ಟು ಹೆಣಗಾಡಿದರೇನು, ಜಗತ್ತಿನ ಕ್ಷೇಮವನ್ನು ಸಾಧಿಸಲಾಗುವುದೇ? ಸರ್ವ ಜನರ, ಸಮನಾದ ಕ್ಷೇಮವೆಂದೂ ಕೈಗೆಟುಕದ ಮರೀಚಿಕೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"The righteousness and the bow of Rama, the wisdom of Krishna and the compassion of Gautama - all these could not eradicate evil/grief from this earth permanently. What can common people do even after a lot of struggling? We must find solace and happiness in just trying." - Mankutimma
Video Coming Soon
Detailed video explanations by scholars and experts will be available soon.