Mankutimmana Kagga by D.V. Gundappa
ಸುಲಭವೇನಲ್ಲ ನರಲೋಕಹಿತನಿರ್ಧಾರ । ಬಲಕೆ ನೋಳ್ಪರ್ ಕೆಲರು, ಕೆಲರೆಡಕೆ ನೋಳ್ಪರ್ ॥ ವಿಲವಿಲನೆ ಚಪಲಿಸುವ ಮನುಜಸ್ವಭಾವದಲಿ । ನೆಲೆಗೊತ್ತು ಹಿತಕೆಲ್ಲಿ? - ಮಂಕುತಿಮ್ಮ ॥ ೮೫೫ ॥
sulabhavEnalla naralOka hita nirdhAra । balake nOLpar kelaru, kelar eDake nOLpar ॥ vilavilane chapalisuva manuja svabhAvadali । nele gottu hitakelli? - Mankutimma ॥ 855 ॥
ಲೋಕದಲ್ಲಿ ಸರ್ವರ ಹಿತವನ್ನು ನಿರ್ಧರಿಸುವುದು ಸುಲಭವೇನಲ್ಲ. ಏಕೆಂದರೆ ಚಪಲತೆಯಿಂದ ಕೂಡಿದ ಚಂಚಲ ಮನಸ್ಸಿನ ಮನುಷ್ಯರಲ್ಲಿ ಕೆಲವರು ಬಲಕ್ಕೆ ನೋಡಿದರೆ ಕೆಲವರು ಎಡಕ್ಕೆ ನೋಡುತ್ತಾರೆ. ಹಾಗಿರುವಾಗ ಆ ಹಿತವನ್ನು ಸಾಧಿಸಲು ನೆಲೆಯೂ ಇಲ್ಲ ಹಾದಿಯೂ ಕಾಣುವುದಿಲ್ಲ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"It is not easy in this human world to understand what is good and what is bad. Some look to the right, some look to the left. If you follow the fickle definition of human happiness - how can one ever find happiness?" - Mankutimma
Video Coming Soon
Detailed video explanations by scholars and experts will be available soon.