Back to List

Kagga 854 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸರ್ವಹಿತವೊಂದುಂಟೆ? ಅದಕೆ ಪಥ ನಮಗುಂಟೆ? । ನಿರ್ವಾಹಸಾಧನಗಳೆತ್ತ? ಗುರುವೆತ್ತ? ॥ ಪೂರ್ವವನು ನೆಟ್ಟಗಿಪ ನರಕೃತಿಯಿನಾಗದೇನ್ । ಅರ್ವಾಚಿಯಲಿ ಸೊಟ್ಟು? - ಮಂಕುತಿಮ್ಮ ॥ ೮೫೪ ॥

sarvahitavondu unTe? adake patha namagunTe? । nirvAha sAdhanagaLu etta? guruvetta? ॥ pUrvavanu neTTagippa narakRutiyin aagadEn । arvAchiyali soTTu? - Mankutimma ॥ 854 ॥

Meaning in Kannada

ಈ ಜಗತ್ತಿನಲ್ಲಿ ಎಲ್ಲರಿಗೂ ಹಿತವಾದುದು ಎನ್ನುವುದು ಉಂಟೆ? ಇದ್ದರೆ ಅದನ್ನು ಸಾಧಿಸುವ ಹಾದಿ ಯಾವುದು? ಅದನ್ನು ಸಾಧಿಸಲು ನಮಗಿರುವ ಉಪಕರಣಗಳಾವುವು? ನಮಗದನ್ನು ಕಲಿಸುವ ಗುರುವು ಯಾರು? ತಮ್ಮ ಪೂರ್ವವನ್ನು ಸರಿಪಡಿಸಿಕೊಳ್ಳಲು ಮನುಷ್ಯರ ಈಗಿನ ಕರ್ಮಗಳಿಂದ ಸಾಧ್ಯವಿಲ್ಲವೇ? ಹಾಗೆ ಸರಿಪಡಿಸಿಕೊಳ್ಳುವ ಪ್ರಯತ್ನದಲ್ಲಿ ಭವಿಷ್ಯದ ಬದುಕು ಸೊಟ್ಟಗಾಗುವುದಿಲ್ಲವೇನು? ಎನ್ನುವ ಪ್ರಶ್ನೆಗಳನ್ನು ಕೇಳುತ್ತಾ, ಕೆಲವು ವಿಚಾರಗಳ ಮಂಥನಕ್ಕೆ ನಮಗೆ ಆಹ್ವಾನವಿತ್ತಂತೆ ಇದೆ, ಮಾನ್ಯ ಗುಂಡಪ್ಪನವರ ಈ ಮುಕ್ತಕ.

Meaning & Interpretation

"Is there a something like universal happiness? What is the path to get that? What are the ways to achieve it? Where can one find a teacher to show us the way? If we embark on a mission to set the past right - will the same actions not become crooked in the future?" - Mankutimma

Themes

Morality

Video Section

Video Coming Soon

Detailed video explanations by scholars and experts will be available soon.