Mankutimmana Kagga by D.V. Gundappa
ಸಾರ್ವಲೌಕಿಕಸೌಖ್ಯ ನೆಲಸುವನ್ನೆಗಮಿಳೆಯೊ- । ಳೊರ್ವನುಂ ಸುಖಿಯಲ್ತು, ದಿಟದಿ. ಪೂರ್ಣದಲಿ ॥ ಒರ್ವನುಬ್ಬಸದ ಬಿಸಿ ವಿಷವಾಯುವಾಗಿ ತಾ । ನುರ್ವರೆಯ ಮುಸುಕೀತು - ಮಂಕುತಿಮ್ಮ ॥ ೮೫೩ ॥
sArvalaukika saukhya nelasuvannegam iLeyoL । orvanum sukhiyaltu, diTadi pUrNadali ॥ orvana ubbasada bisi viShavAyuvAgi tAn । urvareya musukItu - Mankutimma ॥ 853 ॥
ಈ ಭೂಮಿಯ ಮೇಲೆ ಸರ್ವಜನರ ಸುಖ ನೆಲೆಗೊಳ್ಳುವ ತನಕ ಎಲ್ಲರೂ ಸುಖಿಗಳು ಎಂದು ಹೇಳಲು ಆಗುವುದಿಲ್ಲ. ಇಲ್ಲಿ ಎಲ್ಲರೂ ಸರ್ವ ಕಾಲಕ್ಕೂ ಸುಖಿಗಳಲ್ಲ ಎನ್ನುವುದು ಸತ್ಯ. ಏಕೆಂದರೆ ಯಾರೋ ಒಬ್ಬನ ಉಬ್ಬಸದ ಉಸಿರು ವಿಷಗಾಳಿಯಾಗಿ ಈ ಜಗತ್ತನ್ನೇ ಆವರಿಸಿಕೊಳ್ಳಬಹುದು ಎಂದು ಹೇಳುತ್ತಾ ಜಗತ್ತಿನ ಮನುಷ್ಯನ ಬದುಕಿನ ಒಂದು ಆಯಾಮವನ್ನು ನಮಗೆ ತೋರಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"For one to be completely happy in this world, every body (barring none) should be happy - in totality. Even if one of them is unhappy, his sigh filled with grief will become poisonous and consume (envelope) the entire world." - Mankutimma
Video Coming Soon
Detailed video explanations by scholars and experts will be available soon.