Mankutimmana Kagga by D.V. Gundappa
ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ । ಪ್ರತ್ಯೇಕ ಜೀವದಶೆಯವನಂಗಭಂಗಿ ॥ ಸತ್ಯಸತ್ತ್ವಜ್ವಾಲೆ ವಿಶ್ವಮಾಯಾಲೀಲೆ । ಪ್ರತ್ಯಗಾತ್ಮನು ನೀನು - ಮಂಕುತಿಮ್ಮ ॥ ೮೫೦ ॥
nRutyavO brahma naTarAjanadu jagavella । pratyEka jIvadasheyu avana anga bhangi ॥ satya sattva jvAle vishvamAyAlIle । pratyagAtmanu nInu - Mankutimma ॥ 850 ॥
ಈ ಜಗತ್ತೆಲ್ಲ, ಆ ಪರಬ್ರಹ್ಮನ ನಾಟ್ಯವಿದ್ದಂತೆ. ಇಲ್ಲಿರುವ ಜೀವಿಗಳೆಲ್ಲವೂ ಅವನ ಆ ನಾಟ್ಯದ ಬೇರೆಬೇರೆ ವಿಧದ ಭಂಗಿಗಳು. ಶುದ್ಧಸತ್ವದ ಆ ಬೆಂಕಿಯೇ ಈ ವಿಶ್ವದಲ್ಲಿ ಮಾಯಾಲೀಲೆಯನ್ನು ತೋರುತ್ತಿದೆ. ನೀನು ಕೇವಲ ಆ ಪರಬ್ರಹ್ಮ ವಸ್ತುವಿನ ವಿಸ್ತೃತ ರೂಪವಷ್ಟೆ, ಎಂದು ಒಂದು ಗಹನವಾದ ತತ್ವವನ್ನು ಪ್ರತಿಪಾದಿಸಿದ್ದಾರೆ ಮಾನ್ಯ ಗುಂಡಪ್ಪನವರು.
"The world is nothing but the dance of the creator. Every being is part of the dance as one of his body parts. His original energy flames manifest as the action in this world. You are just a carrier of that energy. " - Mankutimma
Video Coming Soon
Detailed video explanations by scholars and experts will be available soon.