Mankutimmana Kagga by D.V. Gundappa
ಒಮ್ಮನಸಿನಿಂದ ನೀನೀ ತತ್ತ್ವವಂ ಗ್ರಹಿಸು । ಬ್ರಹ್ಮಲೀಲೆಗೆ ಗೊತ್ತುಗುರಿ ಲೆಕ್ಕವಿಲ್ಲ ॥ ಸುಮ್ಮನಿರು ನಿನ್ನ ಪಾಡನು ಪಡುತ ತುಟಿ ಬಿಗಿದು । ನೆಮ್ಮದಿಗೆ ದಾರಿಯದು - ಮಂಕುತಿಮ್ಮ ॥ ೮೪೯ ॥
ommanasininda nInI tattvavam grahisu । brahma lIlege gottu guri lekkavilla ॥ summaniru ninna pADanu paDuta tuTi bigidu । nemmadige dAriyadu - Mankutimma ॥ 849 ॥
ಏಕಾಗ್ರ ಮನಸ್ಸಿನಿಂದ ನೀನು ಈ ತತ್ವವನ್ನು ಗ್ರಹಿಸು. ಪರಮಾತ್ಮನ ಲೀಲಾವಿನೋದಕ್ಕೆ ಮಿತಿಯಿಲ್ಲ, ಗೊತ್ತು ಗುರಿಯಿಲ್ಲ. ನಿನಗೆ ಸಂದ ಪಾಡನ್ನು ಪಡುತ್ತ ಮೌನವಾಗಿ, ಸುಮ್ಮನೆ, ಶಾಂತವಾಗಿರು. ನೆಮ್ಮದಿಯ ಬದುಕಿಗೆ ಇದೇ ದಾರಿ,ಎಂಬ ಸಂದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Grasp this thought with single minded attention. There is no purpose, no explanation to the dance of the Creator. You get though your role in this act even if it means suffering. You must do so without much cribbing - with stiff lips. It is the only way to find peace." - Mankutimma
Video Coming Soon
Detailed video explanations by scholars and experts will be available soon.