Mankutimmana Kagga by D.V. Gundappa
ಸ್ಥಿರ ಹಿಮಾಚಲ ಬೊಮ್ಮ, ಚರ ಜಾಹ್ನವಿಯೆ ಮಾಯೆ । ಪರಸತ್ತ್ವ ಘನದ ವಿದ್ರವರೂಪ ವಿಶ್ವ ॥ ಪರಮಾರ್ಥಕೊಂದಕ್ಷಿ ವೆವಹಾರಕಿನ್ನೊಂದು । ಎರಡುಮೊಂದಾಂತರ್ಯ - ಮಂಕುತಿಮ್ಮ ॥ ೮೪೮ ॥
sthira himAchala bomma, chara jAhnaviye mAye । para sattva ghanada vidrava rUpa vishva ॥ paramArthake ondu akShi vevahArake innondu । eradum ondAntarya - Mankutimma ॥ 848 ॥
ಆಚಲವಾದಂತಹ ಹಿಮಾಲಯ ಪರ್ವತದಂತೆ ಪರಬ್ರಹ್ಮ ವಸ್ತುವು. ಜಗತ್ತಿನ ಮಾಯೆಯೇ ಆ ಹಿಮಾಲಯ ಪರ್ವತದಿಂದ ಹೊರಡುವ ಜಾಹ್ನವಿ,ಎಂದರೆ ಗಂಗಾನದಿಯಂತೆ. ಹಾಗೆಯೇ ಪರಸತ್ವ ಎನ್ನುವುದು ಘನರೂಪವಾದರೆ, ಈ ವಿಶ್ವ ಆ ಪರಸತ್ವದ ದ್ರವ ರೂಪ. ಪರಮಾರ್ಥವನ್ನು ನೋಡುವ ಮತ್ತು ಜಗತ್ತಿನ ವ್ಯವಹಾರವನ್ನು ನೋಡುವ ನಮ್ಮ ದೃಷ್ಟಿ ಬೇರೆಬೇರೆಯಾದರೂ ಎರಡರೊಳಗಿರುವ ಅಂತರಂಗದ ಸತ್ವ ಒಂದೇ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
"The immovable Himalaya is like the Creator. The flowing Ganges is like the illusion of this creation. The world is the molten form of the solid matter of the universal truth. One who knows how to see the truth as well as the world in two different views (and balance them) will find peace inside." - Mankutimma
Video Coming Soon
Detailed video explanations by scholars and experts will be available soon.