Back to List

Kagga 847 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನೆಲದ ಬೇಸಾಯ ತಾನೊಳ್ಳಿತಾಗಿರೆ ನಿನಗೆ । ಫಲದೆಂತಹುದೆಂಬ ಶಂಕೆಗೆಡೆಯುಂಟೆ? ॥ ಒಳಿತರೊಳೆ ನೀಂ ಬಾಳು; ಪರವದೆಂತಿರ್ದೊಡೇಂ? । ಇಳೆಯೆ ಬಾಗಿಲು ಪರಕೆ - ಮಂಕುತಿಮ್ಮ ॥ ೮೪೭ ॥

nelada bEsAya tAn oLLitAgire ninage । phala adentahudemba shankege eDeyunTe? ॥ oLitaroLe nIm bALu; paravadu entirdoDe Em? । iLeye bAgilu parake - Mankutimma ॥ 847 ॥

Meaning in Kannada

ಹೇಗೆ, ರೈತ ತನ್ನ ನೆಲದ ಬೇಸಾಯವನ್ನು ಸೂಕ್ತ ರೀತಿಯಲ್ಲಿ ಮಾಡಿದ್ದರೆ ‘ ಫಸಲು ಹೇಗೆ ಬರುತ್ತದೋ? ‘ ಎನ್ನುವ ಅನುಮಾನ ಪದಬೇಕಾಗಿಲ್ಲವೋ, ಅದೇ ರೀತಿ ಒಳ್ಳೆಯತನದಿಂದ ಬಾಳಿದರೆ ಬದುಕಿನ ನಂತರ ಎಂತಹ ಫಲಗಳು ಸಿಗುತ್ತವೆಯೋ ಎಂದು ಚಿಂತಿಸುವ ಅಗತ್ಯವೇ ಇಲ್ಲ, ಏಕೆಂದರೆ ಈ ಭೂಮಿಯ ಜೀವನವೇ ಪರಕ್ಕೆ ಬಾಗಿಲು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

"If the hard work put in agriculture is right, then is there any doubt about the produce? You must lead the life in this world thus (to the best standards of morality). What can the after life have for you then? The life here is the gates to the life later." - Mankutimma

Themes

LifeMoralityDuty

Video Section

Video Coming Soon

Detailed video explanations by scholars and experts will be available soon.