Mankutimmana Kagga by D.V. Gundappa
ಮರಣದಿಂ ಮುಂದೇನು? ಪ್ರೇತವೋ? ಭೂತವೋ? । ಪರಲೋಕವೋ? ಪುನರ್ಜನ್ಮವೊ? ಅದೇನೋ! ॥ ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ । ಧರೆಯ ಬಾಳ್ಗದರಿನೇಂ? - ಮಂಕುತಿಮ್ಮ ॥ ೮೪೬ ॥
maraNadim mundEnu? prEtavO? bhUtavO? । paralOkavO? punarjanmavo? adEnO! ॥ tirugi bandavarilla, varadi tandavarilla । dhareya bALge adarinEm? - Mankutimma ॥ 846 ॥
ಮರಣದ ನಂತರವೇನು? ನಾವು ಪ್ರೇತವಾಗುತ್ತೇವೇಯೋ, ಭೂತವಾಗುತ್ತೇವೆಯೋ, ಪರಲೋಕಕ್ಕೆ, ಸೇರುತ್ತೇವೆಯೋ ಅಥವಾ ಮತ್ತೆ ಜನ್ಮಪಡೆದುಕೊಳ್ಳುತ್ತೇವೆಯೋ, ಅದೇನೋ ಗೊತ್ತಿಲ್ಲ. ಏಕೆಂದರೆ ಮರಣಹೊಂದಿದವರಾರೂ ಹಿಂತಿರುಗಿ ಬಂದಿಲ್ಲ ಮತ್ತು ನಮಗೆ ಯಾವ ರೀತಿಯ ವರದಿಯನ್ನೂ ನೀಡಿಲ್ಲ. ಆ ವಿಷಯಗಳನ್ನು ತಿಳಿದುಕೊಳ್ಳುವುದರಿಂದ, ಇಲ್ಲಿನ ಬದುಕು, ಯಾವ ರೀತಿಯಿಂದಲೂ ಬದಲಾಗುವುದಿಲ್ಲ. ಹಾಗಾಗಿ ಅದರ ಬಗ್ಗೆ ಚಿಂತಿಸುವುದು ಬೇಡ ಎನ್ನುವ ಸಂದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"What will happen after death? Does one become a bodyless soul? or a ghost? Will there be a different world? Or another birth in this world? Whatever! There is no one who has comeback or brought a message from those who have seen. How does all that effect our life in this world?" - Mankutimma
Video Coming Soon
Detailed video explanations by scholars and experts will be available soon.