Mankutimmana Kagga by D.V. Gundappa
ಪೆರತೊಂದು ಬಾಳ ನೀನಾಳ್ವ ಸಾಹಸವೇಕೆ? । ಹೊರೆ ಸಾಲದೇ ನಿನಗೆ, ಪೆರರ್ಗೆ ಹೊಣೆವೋಗೆ? ॥ ಮರದಿ ನನೆ ನೈಜದಿಂದರಳೆ ಸೊಗವೆಲ್ಲರ್ಗೆ । ಸೆರೆಮನೆಯ ಸೇಮವೇಂ? - ಮಂಕುತಿಮ್ಮ ॥ ೮೪೫ ॥
peratondu bALa nInu aaLva sAhasavEke? । hore sAlade ninage, perarge hoNevOge? ॥ maradi nane naijadinda araLe sogavu ellarge । seremaneya sEmavEm? - Mankutimma ॥ 845 ॥
ಬೇರೊಬ್ಬರ ಬದುಕನ್ನು ಆಳುವ ಆಸೆ ಮತ್ತು ಸಾಹಸ ನಿನಗೇಕೆ? ನೀನು ಹೊತ್ತು ತಂದಿರುವ ನಿನ್ನ ಜೀವನದ ಹೊರೆ ನಿನಗೆ ಸಾಲದೇ? ಅನ್ಯರಿಗೆ ಹೊರೆಯಾಗುವಂತಹ ನಿನ್ನ ಸಲಹೆ ಸಂದೇಶಗಳು ಅವರಿಗೇಕೆ? ಮರದಲ್ಲಿನ ಮೊಗ್ಗು ಸಹಜವಾಗಿ ಅರಳಿದರೆ ಅದು ಸೊಗಸು. ನಿರ್ಬಂಧದಲ್ಲಿ ನಡೆಸುವ ಸೆರೆಮನೆಯ ವಾಸ ಕ್ಷೇಮವೇ? ಎಂದು ಪ್ರಶ್ನಿಸುತ್ತಾ ಅನ್ಯರ ಜೀವನದಲ್ಲಿ ಹಸ್ತಕ್ಷೇಪ ಮಾಡದಿರುವುದು ಸೂಕ್ತವೆನ್ನುವ ಸಂದೇಶವನ್ನು ನಮಗೆ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Why do you want the adventure of controlling some other life (apart from yours)? Isn't your load enough? Why do you want to carry other people's burden also? If a bud blooms by itself in a plant, it gives pleasure to everybody. If you force it to your liking, then it may not. Not everything in this world can run according to rules like in a prison." - Mankutimma
Video Coming Soon
Detailed video explanations by scholars and experts will be available soon.