Back to List

Kagga 844 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬೀಳಿಸದಿರೆಲೊ ನಿನ್ನ ನೆರಳನಿತರರ ಮೇಲೆ । ಬಾಳಿಕೊಳುಗವರು ತಂತಮ್ಮ ಬೆಳಕಿನಲಿ ॥ ಮೇಲುಬೀಳುಗಳಾರ್ಗದೆಂತೊ ನೀನೇನರಿವೆ? । ತಾಳದಿರು ಗುರುತನವ - ಮಂಕುತಿಮ್ಮ ॥ ೮೪೪ ॥

bILisadirelo ninna neraLanu itarara mEle । bALikoLugavaru tamtamma bELakinali ॥ mElu bILugaLu aarge adento nInu Enu arive? । tALadiru gurutanava - Mankutimma ॥ 844 ॥

Meaning in Kannada

ನಿನ್ನ ನೆರಳಿನ ಛಾಯೆಯನ್ನು ಇತರರ ಮೇಲೆ ಬೀಳಿಸದೆ ಇರು. ಅವರು ತಮ್ಮದೇ ಬೆಳಕಿನಲ್ಲಿ ಬಾಳಿಕೊಳ್ಳಲಿ. ಯಾರಿಗೆ ಯಾವುದು ಮೇಲು ಅಥವಾ ಕೀಳು ಎನ್ನುವುದನ್ನು ನೀನು ಏನು ಅರಿತುಕೊಂಡಿದ್ದೀಯೆ? ನೀನು ಗುರು ಪದವಿಯನ್ನು ತಾಳದೆ ಇರು ಎಂದು ಒಂದು ಸೂಕ್ತ ಬುದ್ಧಿವಾದವನ್ನು ನಮಗೆ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Make sure that your shadow is not falling on other people. Let them live as they please in their own light. What do you know about the ups and downs of their life. Don't force yourself as their mentor (without them asking for it)." - Mankutimma

Themes

LifeSocietySelf

Video Section

Video Coming Soon

Detailed video explanations by scholars and experts will be available soon.