Mankutimmana Kagga by D.V. Gundappa
ಸೇರಿರ್ಪುವುಸಿರುಸಿರುಗಳೊಳೆಷ್ಟೊ ಜೀವಾಣು । ಹಾರುತಿಹುವೆಷ್ಟೊ ಚೇತನ ಧೂಳುಕಣದೊಳ್ ॥ ಪ್ರಾರಬ್ಧಗತಿಯ ನಿಶ್ಚಯದಿ ತಿಳಿದವರಿಲ್ಲ । ಆ ರಹಸ್ಯಕ್ಕೆರಗೊ! - ಮಂಕುತಿಮ್ಮ ॥ ೮೪೩ ॥
sErirpudu usiru usirugaLa oLeShTo jIvANu । hArutihuveShTo chEtana dhUL kaNadoL ॥ prArAbdha gatiya nishchayadi tiLidavarilla । aa rahasyakke erago! - Mankutimma ॥ 843 ॥
ನಾವು ಎಳೆದುಕೊಳ್ಳುವ ಪ್ರತೀ ಉಸಿರಿನಲ್ಲೂ ಬಹಳಷ್ಟು ಜೀವಾಣುಗಳು ಸೇರಿರುತ್ತವೆ. ನಮ್ಮ ಸುತ್ತಲಿನ ಧೂಳಲ್ಲಿ ಚೈತನ್ಯದ ಅದೆಷ್ಟು ಕಣಗಳಿವೆಯೋ!! ಯಾವುದು, ಹೇಗೆ, ಎಲ್ಲಿಂದ ಬಂದು ನಮ್ಮೊಳಕ್ಕೆ ಸೇರಿಕೊಳ್ಳುತ್ತದೆ ಎಂದು ಖಂಡಿತವಾಗಿ ಯಾರಿಂದಲೂ ಹೇಳಲಾಗುವುದಿಲ್ಲ. ಇದೊಂದು ರಹಸ್ಯ ಮತ್ತು ಆ ರಹಸ್ಯಕ್ಕೆ ನಮಿಸು ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"In each breath there is there are so many living cells. On each spec of dust, there is so many energy particles. Each one is just following the consequences of their previous actions. No one can be certain of their next move. Surrender to the mystery that is behind this machinery of causation." - Mankutimma
Video Coming Soon
Detailed video explanations by scholars and experts will be available soon.