Mankutimmana Kagga by D.V. Gundappa
ಆವ ನೆಲದಲಿ ಮೇದೊ, ಆವ ನೀರನು ಕುಡಿದೊ । ಆವು ಹಾಲ್ಗರೆವುದದನಾರು ಕುಡಿಯುವನೋ! ॥ ಆವ ಬಲವದರಿನೊಗೆದೇಂಗೆಯ್ಸುವುದೊ ಜಗಕೆ! । ಭಾವಿಸಾ ಋಣಗತಿಯ - ಮಂಕುತಿಮ್ಮ ॥ ೮೪೨ ॥
aava neladalu mEdo, aava nIranu kuDido । aavu hAlgarevudu adanAru kuDiyuvanO! ॥ aava balavadarin ogedu Em geysuvudo jagake! । bhAvisA RuNagatiya - Mankutimma ॥ 842 ॥
ಯಾವುದೋ ನೆಲದಲ್ಲಿ ಬೆಳೆದ ಹುಲ್ಲನ್ನು ತಿಂದು ಯಾವುದೋ ಕೆರೆಯ ಅಥವಾ ತೊರೆಯ ನೀರನ್ನು ಕುಡಿದು ಒಂದು ಹಸು ಹಾಲನ್ನು ನೀಡುತ್ತದೆ. ಆ ಹಾಲನ್ನು ಯಾರು ಕುಡಿಯುವರೋ ಮತ್ತು ಹಾಗೆ ಕುಡಿದವರಿಂದ ಎಂತಹ ಕಾರ್ಯವಾಗುತ್ತದೆಯೊ ಮತ್ತು ಆ ಕಾರ್ಯದಿಂದ ಈ ಜಗತ್ತಿಗೆ ಏನುಪಯೋಗವೋ ಕಂಡವರಾರು? ಇದು ಋಣಗತಿ, ಇದನ್ನು ಭಾವಿಸು ಎಂದು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"A cow grazes in someone's field, drinks water from some stream and someone milks it. Somebody will drink that milk. From the strength that he gets from drinking the milk, he will do actions that effects the world in some way. Try to think about the chain of causation and debt." - Mankutimma
Video Coming Soon
Detailed video explanations by scholars and experts will be available soon.