Mankutimmana Kagga by D.V. Gundappa
ನಿನ್ನೆಂಜಲಗುಳಾವ ಕಾಲುವೆಯ ಸೇರುವುದೊ! । ಮಣ್ಣಾವುದದರಿಂದೆ ಗರ್ಭವತಿಯಹುದೋ! ॥ ಅನ್ನವದರಿಂದಾರ್ಗೊ! ಲೋಕಕವರಿಂದೇನೊ! । ಬಣ್ಣಿಸುವರಾರದನು? - ಮಂಕುತಿಮ್ಮ ॥ ೮೪೧ ॥
ninna enjila uguLu aava kAluveya sEruvudo! । maNNAvudu adarinde garbhavatiyahudO! ॥ annavu adarinda aargo! lOkakavarindEno! । baNNisuvaru aaradanu? - Mankutimma ॥ 841 ॥
ನೀನುಂಡು ಕೈ ತೊಳೆವ ನೀರು ಯಾವ ಕಾಲುವೆಯ ಸೇರುವುದೋ? ಆ ಕಾಲುವೆಯ ನೀರು ಯಾವ ಭೂಮಿಯನ್ನು ತಣಿಸುವುದೋ? ಹಾಗೆ ತಣಿದ ಯಾವ ಭೂಮಿ ಪೈರ ತಳೆಯುವುದೋ? ಆ ಪೈರಿಂದಾಗುವ ಕಾಳಿನ ಆಹಾರ ಯಾರ ಉದರವ ಸೇರುವುದೋ? ಆ ಕಾಳ ತಿಂದವರಿಂದ ಲೋಕಕ್ಕೇನು ಮಾಡುವರೋ? ಎಂಬ ಪ್ರಶ್ನೆಗಳಿಗೆ ನಮಗೆ ಎಂದಿಗೂ ಉತ್ತರ ಸಿಗಲಾರದು ಎಂದು ಜಗತ್ತಿನಲ್ಲಿ ನಡೆಯುವ ವಿಧ್ಯಮಾನಗಳ ನಿಗೂಢತೆಯನ್ನು ಬಣ್ಣಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"When you spit out, you will not know which stream that goes into. It reaches some land which holds a seed that gets and germinates with life. That becomes food for someone later. Because that person could eat, the world will be effected differently. Who can describe the entire chain of causation?" - Mankutimma
Video Coming Soon
Detailed video explanations by scholars and experts will be available soon.