Mankutimmana Kagga by D.V. Gundappa
ಭುಕ್ತಿ ನಿನಗೆಲ್ಲಿಯದು? ಭತ್ತ ತಾನೆಲ್ಲಿಯದೊ! । ಎತ್ತಲಿನ ಗೊಬ್ಬರವೊ! ಎತ್ತಲಿನ ನೀರೋ! ॥ ಭಾಕ್ತವಾರಾರ ದುಡಿತದಿನೊ ನಿನಗಾಗಿಹುದು! । ಗುಪ್ತಗಾಮಿನಿಯೊ ಋಣ - ಮಂಕುತಿಮ್ಮ ॥ ೮೪೦ ॥
bhukti ninagelliyadu? Bhatta taanelliyado! । ettalina gobbaravo! ettalina nIrO! ॥ bhAktavu aarAra duDitadino ninagAgihudu! । guptagAminiyo RuNa - Mankutimma ॥ 840 ॥
ನೀನುಣ್ಣುವ ಆಹಾರ ನಿನಗೆಲ್ಲಿಂದ ಸಿಕ್ಕಿತು? ಆ ಆಹಾರದಲ್ಲಿನ ಅನ್ನದ ಅಕ್ಕಿಯ ಬತ್ತ ಎಲ್ಲಿಂದ ಬಂದಿತೋ? ಆ ಬತ್ತವ ಬೆಳೆಯಲು ಹಾಕಿದ ಗೊಬ್ಬರವೆಲ್ಲಿಯದೋ? ಮತ್ತು ಆ ಬೆಳೆಗೆ ಹನಿಸಿದ ನೀರು ಎಲ್ಲಿಯದೋ? ಆ ಬೆಳೆಯನ್ನು ಬೆಳೆಸಲು ಯಾರ್ಯಾರ ಶ್ರಮ ಸೇರಿದೆಯೋ? ಇವ್ಯಾವುದೂ ನಮಗೆ ತಿಳಿಯುವುದಿಲ್ಲ ಮತ್ತು ಅರ್ಥವೂ ಆಗುವುದಿಲ್ಲ. ಇದೆಲ್ಲ ನಾವು ಪಡೆದುಕೊಂಡು ಬಂದಂತಹ, ಆದರೆ ‘ಅಭೇದನೀಯ ರಹಸ್ಯ ಋಣ’ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Where has this food that you eat come from? The rice is from somewhere. The manure is from elsewhere. Water from somewhere else. The meal has been prepared owing to the efforts of many many people. The debt of food is untraceable." - Mankutimma
Video Coming Soon
Detailed video explanations by scholars and experts will be available soon.