Mankutimmana Kagga by D.V. Gundappa
ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ! । ಆವ ಧೂಳಿನೊಳಾವ ಚೈತನ್ಯಕಣವೋ! ॥ ಜೀವವಿಂತಜ್ಞಾತ ಸೂತ್ರದಾಟದ ಬೊಂಬೆ । ಭಾವಿಸಾ ಸೂತ್ರಗಳ - ಮಂಕುತಿಮ್ಮ ॥ ೮೩೯ ॥
aava gALiyu adAva dhUL kaNava pottihudo! । aava dhULinoLu aava chaitanya kaNavO! ॥ jIva intu ajNAta sUtrada aaTa bombe । bhAvisu aa sUtragaLa - Mankutimma ॥ 839 ॥
ಯಾವ ಗಾಳಿಯು ಯಾವ ಧೂಳಿನ ಕಣವನ್ನು ಹೊತ್ತು ತರುತ್ತದೋ, ಯಾವ ಧೂಳಿನ ಕಣದಲ್ಲಿ ಯಾವ ಚೈತನ್ಯವು ಅಡಗಿದೆಯೊ!!!! ಜೀವವೂ ಸಹ ಹೀಗೆಯೇ ಯಾವುದೊ ಒಂದು ಅಜ್ಞಾತ ಶಕ್ತಿಯ ಕೈಯಲ್ಲಿನ ಸೂತ್ರದ ಆಟಕ್ಕೆ ಬೊಂಬೆಯಂತೆ ಕುಣಿಯುತ್ತದೆ. ಆ ಸೂತ್ರಗಳನ್ನು ಭಾವಿಸು ಎಂದು ಹೇಳುತ್ತಾ ಪರಮ ಚೈತನ್ಯವು ಹೇಗೆ ಇಡೀ ಜಗತ್ತನ್ನು ನಡೆಸುತ್ತಿದ್ದರೂ, ತನ್ನ ಕ್ರಿಯೆಯನ್ನು ಸ್ಪಷ್ಟವಾಗಿ ತೋರಗೊಡದೆ ನಿಗೂಢವಾಗಿಟ್ಟಿರುವ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
"One can not know what grain of sand is carried by what wind or what spec of dust is carrying what energy particle. Life is thus a puppet controlled by strings that you cannot see. Try to think and contemplate on those strings." - Mankutimma
Video Coming Soon
Detailed video explanations by scholars and experts will be available soon.