Mankutimmana Kagga by D.V. Gundappa
ಮುಸುಕಿಹುದು ಹುಟ್ಟಳಿವುಗಳ ಕಾರಣವ ಮಬ್ಬು । ಮಸಕಿನಲಿ ಹುದುಗಿಹುವು ಮೋಹಮೂಲಗಳು ॥ ನಿಶಿ ಮುಚ್ಚಿಹುದು ದಿನಪಚಂದಿರರ ಹುಟ್ಟೆಡೆಯ । ಮಿಸುಕುವ ರಹಸ್ಯ ನೀಂ - ಮಂಕುತಿಮ್ಮ ॥ ೮೩೮ ॥
musukihudu huTTu aLivugaLa kAraNava mabbu । masakinali hudugiguhuvu mOhamUlagaLu ॥ nishi mucchihudu dinapa chandirara huTTeDeya । misukuva rahasya nIM - Mankutimma ॥ 838 ॥
ಹುಟ್ಟು ಸಾವುಗಳ ಕಾರಣಗಳು ನಿಚ್ಚಳವಾಗಿಲ್ಲದೆ ಕವಿಯಲ್ಪಟ್ಟಿವೆ. ಈ ಜಗತ್ತಿನ ಮೇಲೆ ಮೋಹದ ಕಾರಣವೂ ಸಹ ಕವಿಯಲ್ಪಟ್ಟಿದೆ. ಸೂರ್ಯ ಚಂದ್ರರ ಉಗಮಸ್ಥಾನದ ಜ್ಞಾನವೂ ನಮಗಿಲ್ಲ. ಹಾಗೆಯೇ ನೀನೂ ಸಹ ಇವುಗಳಿಗೆಲ್ಲಾ ಸ್ಪಂದಿಸುವ ಒಂದು ರಹಸ್ಯವೇ, ಎಂದು ಸೃಷ್ಟಿಯ ರಹಸ್ಯಗಳ ಬಗ್ಗೆ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
"The truth about birth and death is concealed behind a veil. In this deciet is hidden all the truth about attachment. Just like darkness covers the birth of the Sun and the Moon. It is your task to decipher the mystery and see the truth for yourself." - Mankutimma
Video Coming Soon
Detailed video explanations by scholars and experts will be available soon.