Back to List

Kagga 837 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಎತ್ತೆತ್ತ ನೋಡಲುಂ ಗುಪ್ತ ಭೂತಗಳಯ್ಯ । ಕತ್ತಲೆಯೊಳಾಡುತಿಹ ದೆವ್ವಗಳ ಸುಳಿವು ॥ ಮುತ್ತಿ ಮುಸುಕಿಹುದು ಜೀವನದ ರಹಸ್ಯವೊಂದು । ಬೆತ್ತಲೆಯದಹುದೆಂತು? - ಮಂಕುತಿಮ್ಮ ॥ ೮೩೭ ॥

ettetta nODalum gupta bhUtagaLayya । kattaleyoLu ADutiha devvagaLa suLivu ॥ mutti musukihudu jIvanada rahasyavondu । bettaleyadu ahudentu? - Mankutimma ॥ 837 ॥

Meaning in Kannada

"ಎಲ್ಲಿ ನೋಡಿದರಲ್ಲಿ ಬಚ್ಚಿಟ್ಟುಕೊಂಡಿರುವ ಭೂತಗಳು. ಕತ್ತಲೆಯಲ್ಲಿ ಓಡಾಡುತಿಹ ದೆವ್ವಗಳು. ‘ಜೀವ’ ವನ್ನು ರಹಸ್ಯವೊಂದು ಮುಸುಕಿದಂತಿದೆ. ಮುಸುಕು ತೊಲಗಿ ನಮಗೆ ಆ ರಹಸ್ಯ ತೋರುವುದು ಹೇಗೆ? " ಎನ್ನುತ್ತಾ ಒಂದು ಅದ್ಭುತ ವಿಚಾರವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Wherever I see, there are hidden demons. Traces of ghosts wandering in the dark. A thick darkness envelopes the secret of life. How am I to see the naked truth?" - Mankutimma

Themes

WisdomLife

Video Section

Video Coming Soon

Detailed video explanations by scholars and experts will be available soon.