Mankutimmana Kagga by D.V. Gundappa
ಬಹುರಹಸ್ಯವೊ ಸೃಷ್ಟಿ, ಬ್ರಹ್ಮರಹಸ್ಯವೊ ಜೀವ । ಅಹುದದಲ್ಲವಿದೆಂಬ ವಾದ ಬರಿ ಹರಟೆ ॥ ಗುಹೆಯೊಳಿಹುದೆಲ್ಲ ತತ್ತ್ವಗಳ ತತ್ತ್ವದ ಮೂಲ । ಬಹಿರಂತರ ರಹಸ್ಯ - ಮಂಕುತಿಮ್ಮ ॥ ೮೩೬ ॥
bahu rahasyavo sRuShTi brahma rahasyavo jIva । ahudu adu allvu idu emba vAda bari haraTe ॥ guheyoLu ihudu ella tattvagaLa tattvada mUla । bahir antara rahasya - Mankutimma ॥ 836 ॥
ಸೃಷ್ಟಿ ಬಹಳ ರಹಸ್ಯ. ಜೀವವೂ ಬಹಳ ರಹಸ್ಯದಿಂದ ಕೂಡಿದೆ. ಇದು ಹೌದು, ಅದು ಆಲ್ಲ, ಇದು ಇರಬಹುದು ಅಥವಾ ಅದೂ ಇರಬಹುದು ಎಂಬ ವಿಚಾರಗಳು ಕೇವಲ ವ್ಯರ್ಥ ಮಾತುಗಳು. ಒಳಹೊರಗುಗಳ ರಹಸ್ಯದ ಮೂಲವೇ ನಮ್ಮ ಅಂತರಂಗದ ಒಳಪದರಗಳಲ್ಲಿ ಅಡಗಿದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Creation is a big mystery. Greatest mystery is about life. This is true, that is false - all such logic are just banter. In this cave, there lies the root of all mystery. The mystery itself surrounds everything - inside and out." - Mankutimma
Video Coming Soon
Detailed video explanations by scholars and experts will be available soon.