Mankutimmana Kagga by D.V. Gundappa
ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ । ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ॥ ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? । ಸತ್ರ ಹೊಸದಿಹುದು ನಡೆ - ಮಂಕುತಿಮ್ಮ ॥ ೮೩೫ ॥
mRutyuvim bhayavEke? dEshAntarakke oyyva । mitranAtam; chitra hosadirpudu alli ॥ sAttvikadi bALdavange ettalEm bhayavihudu? । satra hosadihudu naDe - Mankutimma ॥ 835 ॥
ಸಾವಿನ ಭಯವೇಕೆ? ಈ ಸಾವು ಎಂಬುದು ನಮ್ಮನ್ನು ಹೊಸ ಹೊಸ ಪ್ರದೇಶಗಳನ್ನು ತೋರಿಸುವ, ನಮ್ಮ ಮಿತ್ರ. ಹೊಸ ಸ್ಥಳದಲ್ಲಿ ಹೊಸ ಚಿತ್ರವಿರುತ್ತದೆ. ಈ ಜನ್ಮದಲ್ಲಿ ಸಾತ್ವಿಕನಾಗಿ ಬಾಳಿದವನಿಗೆ, ಮುಂದಿನ ಬಾಳು ಇನ್ನಷ್ಟು ಸುಂದರವಾಗಿರುತ್ತದೆಂಬ ಭಾವದಿಂದ, ಮೃತ್ಯುವಿನ ಭಯವಿರಬೇಕಾಗಿಲ್ಲ. ಅಲ್ಲಿ ಎಲ್ಲವೂ ಹೊಸದಾಗಿರುತ್ತದೆ, ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Why should one fear Death? He is a friend who takes you to a different land. There is a different picture there. If you have lived your life without any sins, then what have you got to fear? It is just a different place to stay - thats all." - Mankutimma
Video Coming Soon
Detailed video explanations by scholars and experts will be available soon.