Back to List

Kagga 834 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೀಗೋ ಹಾಗೋ ಹೇಗೋ ಜನುಮಕಥೆ ಮುಗಿಯುವುದು । ಈಗಲೋ ಆಗಲೋ ಎಂ‌ದೋ ಮುಗಿಯುವುದು ॥ ಸಾಗಿಮುಗಿವುದು; ಮುಗಿದು ಮರೆವುದದೆ ನರಸುಕೃತ । ಭೂಗತಸ್ಥಿತಿ ಮುಕುತಿ - ಮಂಕುತಿಮ್ಮ ॥ ೮೩೪ ॥

hIgO hAgO hEgO janumakathe mugiyuvudu । eegalO aagalO endO mugiyuvudu ॥ sAgimugivudu; mugidu marevudu ade nara sukRuta । bhUgata sthiti mukuti- Mankutimma ॥ 834 ॥

Meaning in Kannada

ಹಾಗೋ ಹೇಗೊ ಹೇಗೆ ಒಂದು ರೀತಿಯಲ್ಲಿ ಹುಟ್ಟಿದವರೆಲ್ಲರ ಜನ್ಮದ ಕಥೆ ಮುಗಿಯುತ್ತದೆ. ಈಗಲೇ ಆಗಬಹುದು, ಯಾವಾಗಲೋ ಅಥವಾ ಇನ್ಯಾವಾಗಲೋ ಆಗಬಹುದು. ಅಂತೂ ಇಂತೂ ಬದುಕು ಸಾಗಿ ಖಂಡಿತವಾಗಿಯೂ ಮುಗಿಯುತ್ತದೆ, ಮುಗಿದು ಈ ಜಗತ್ತು ಆ ವ್ಯಕ್ತಿಯನ್ನು ಮರೆಯುತ್ತದೆ. ಹಾಗೆ ಮರೆತುಹೋಗುವುದೇ ಮನುಷ್ಯ ಪಡೆದುಕೊಂಡು ಬಂದಂತಹ ಪುಣ್ಯ. ಮಣ್ಣಲ್ಲಿ ಮಣ್ಣಾಗಿಹೋಗುವುದೂ ಸಹ ಒಂದು ರೀತಿಯ ಮುಕ್ತಿಯೇ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Like, this, that or some how, the story of this life will end. It may end now, then or at sometime. But it will definitely end. When it ends, we forget everything of this birth. That is a very good fortune. Being dead (under the earth) is liberation." - Mankutimma

Themes

LifeDeathMoralityFateNature

Video Section

Video Coming Soon

Detailed video explanations by scholars and experts will be available soon.