Mankutimmana Kagga by D.V. Gundappa
ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ । ಜಗವ ಸುಡುಗಾಡೆನುವ ಕಟುತಪಸು ಬೇಡ ॥ ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ । ಮಿಗೆಚಿಂತೆ ತಲೆಹರಟೆ - ಮಂಕುತಿಮ್ಮ ॥ ೮೩೩ ॥
nagu naguva kaNgaLige hogeyanu oodalu bEDa। jagava suDugADenuva kaTutapasu bEDa ॥ maguvu tAytande kaNmunde naDevante naDe । mige chinte tale harate - Mankutimma ॥ 833 ॥
ನಗುನಗುತಾ ಇರುವ ಕಣ್ಣುಗಳಿಗೆ ಹೊಗೆಯನೂದ ಬೇಡ. ಈ ಜಗತ್ತು ಒಂದು ಸುಡುಗಾಡು, ಇದೇಕೆ ಬೇಕು ಎನ್ನುವ ಹಠವೂ ಬೇಡ. ಸಹಜವಾಗಿ ತಂದೆ ತಾಯಿಗಳ ಮುಂದೆ ನಡೆದು ನಲಿದಾಡುವ ಮಗುವಂತೆ ಜೀವಿಸು. ಮಿಕ್ಕೆಲ್ಲಾ ವಿಚಾರಗಳೂ ಕೇವಲ ‘ತಲೆಹರಟೆ ‘ ಎಂದು ಬಾಳುವ ರೀತಿಯ ಬಗ್ಗೆ ಒಂದು ಕಿವಿಮಾತನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
"Don't blow smoke into happy eyes. Don't give up on this world equating this to be just a cemetery. Get on with your work with same enthusiasm as a kid walking and playing in front of its parents. Leave all other worries behind – they are all just banter." - Mankutimma
Video Coming Soon
Detailed video explanations by scholars and experts will be available soon.