Mankutimmana Kagga by D.V. Gundappa
ಗುಡಿಯ ಪೂಜೆಯೊ, ಕಥೆಯೊ, ಸೊಗಸುನೋಟವೊ, ಹಾಡೊ । ಬಡವರಿಂಗುಪಕೃತಿಯೊ, ಆವುದೋ ಮನದ ॥ ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ । ಬಿಡುಗಡೆಯೊ ಜೀವಕ್ಕೆ - ಮಂಕುತಿಮ್ಮ ॥ ೮೩೨ ॥
guDiya poojeyo, katheyo, sogasu nOTavo, hADo । baDavaringe upakRutiyo, aavidO manada ॥ baDidATavanu nilisi nemmadiyanu eevudoDe ade । biDugaDeyo jIvakke - Mankutimma ॥ 832 ॥
ಗುಡಿಯ ಪೂಜೆಯಿಂದಲೋ, ಪುರಾಣ ಪುಣ್ಯ ಕಥಾ ಶ್ರವಣದಿಂದಲೋ, ಮೈ ಮರೆತು ಸೊಗಸಾದ ಪ್ರಕೃತಿಯ ನೋಟವನ್ನು ನೋಡುವುದರಲ್ಲಿಯೋ, ದಯಾ ಭಾವದಿಂದ ದೀನಗರಿಗುಪಕಾರವನ್ನು ಮಾಡುವುದರಿಂದಲೋ, ಹೀಗೆ ಯಾವುದಾದರೂ ರೀತಿಯಲ್ಲಿ ಮನಸ್ಸಿನ ಚಂಚಲ ಬಡಿದಾಟವನ್ನು ನಿಲ್ಲಿಸಿ ನೆಮ್ಮದಿಯನ್ನು ಪಡೆಯಬಹುದಾದರೆ, ಅದೇ ‘ಜೀವ’ ಕ್ಕೆ ಮುಕ್ತಿ ಅಥವಾ ಬಂಧನದಿಂದ ಬಿಡುಗಡೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Anything that makes us happy and brings peace to us is liberating. Be it worshiping at a temple, listening to a story (about God), seeing something beautiful, a song, helping the poor – anything would do as long as it can rest the anxiety in the mind and attain peace." - Mankutimma
Video Coming Soon
Detailed video explanations by scholars and experts will be available soon.