Back to List

Kagga 831 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತಳೆಯಲಾರನೆ ಬೊಮ್ಮ ಬೀಭತ್ಸರೂಪಗಳ? । ನಲಿಯಲಾರನೆ ತಿಪ್ಪೆರೊಚ್ಚು ನಾತದಲಿ? ॥ ಮಲವೇನೊ! ಹೊಲೆಯೇನೊ! ಜೀವಸಂಬಧವಲ । ಮಲಿನದಲಿ ನೆನೆ ಶುಚಿಯ - ಮಂಕುತಿಮ್ಮ ॥ ೮೩೧ ॥

taLeyalArane bomma bhIbhatsarUpagaLa? । naliyalArane tippe rochchu nAtadali? ॥ malavEno! holeyEno! jiva sambandhavala । malinadali nene shuchiya - Mankutimma ॥ 831 ॥

Meaning in Kannada

ಆ ಪರಬ್ರಹ್ಮನು ಭಯಂಕರವಾದ ರೂಪಗಳನ್ನು ಧರಿಸಲಾರನೆ? ಅವನು ಹೊಲಸು ನಾರುವ ತಿಪ್ಪೆಗುಂಡಿಯಲ್ಲೂ ಸಂತಸಿಸಲಾರನೆ? ಬದುಕಿನ ಸಂಬಂಧದಲಿ ಮಲಿನವಾದದ್ದು, ಹೊಲಸಾದದ್ದು ಎಲ್ಲವೂ ಉಂಟು. ಮಲಿನತೆಯಲ್ಲಿ ಇದ್ದರೂ ಶುಚಿತ್ವವನ್ನು ನೀನು ಸದಾ ನೆನೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

Meaning & Interpretation

"Can God not take form that can scare you? Can God not enjoy himself in all the dirty stinking filth? What is filth? What is dirt? All of it has its place in this web of life. In dirt, one must remember the cleanliness and be happy." - Mankutimma

Themes

DevotionLifeSelfLove

Video Section

Video Coming Soon

Detailed video explanations by scholars and experts will be available soon.