Back to List

Kagga 830 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕೊಳಕೆಂದು, ಹುಳುಕೆಂದು, ಹೇಸಿಗೆಯ ಹುಳುವೆಂದು । ಇಳೆಯೊಳಾವುದರೊಳಮಸಹ್ಯಪಡಬೇಡ ॥ ಬೆಲೆಯುಂಟು ಕೊಳೆಗಮೀ ಜೀವಸಾಮಾಗ್ರಿಯಲಿ । ಕೊಳೆ ಶುಚಿಖ್ಯಾಪಕವೊ - ಮಂಕುತಿಮ್ಮ ॥ ೮೩೦ ॥

koLakendu, huLukendu, hEsigeya huLuvendu । iLeyoLu aavudaroLam asahya paDabEDa ॥ beleyunTu koLegam ee jIvasAmAgriyali । koLe shuchi khyApakavo - Mankutimma ॥ 830 ॥

Meaning in Kannada

"ನಿನ್ನ ಮನಸ್ಸು ತಿಳಿಯಾಗಿರಿಸಿಕೊಳ್ಳಬೇಕು ಎಂದು ನಿನಗೆ ಬೇಡವಾದದ್ದೆಲ್ಲ ‘ಕೊಳಕು, ಕುಲುಕು, ಹೇಸಿಗೆ, ಹುಳ’ ಎಂದು ಹೇಳುತ್ತಾ ಈ ಜಗತ್ತಿನಲ್ಲಿರುವಾವುದನ್ನೂ ಅಸಹ್ಯ ಪಟ್ಟುಕೊಳ್ಳಬೇಡ". ಜಗತ್ತಿನ ಜೀವನದ ಸಮಗ್ರತೆಯಲ್ಲಿ, ಸೃಷ್ಟಿಯ ಪ್ರತಿಯೊಂದು ವಸ್ತುವಿಗೂ ಒಂದು ಬೆಲೆಯುಂಟು. ಕೊಳೆ ನಮಗೆ ಶುಚಿಯನ್ನು ಜ್ಞಾಪಿಸುತ್ತಿರುತ್ತದೆ, ಎಂದು ಮಾನಸಿಕ ಸಮಭಾವದ ಮೂಲಕ ಶಾಂತಿಯನ್ನು ಸಾಧಿಸುವ ಪರಿಯನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

"Don't cringe and berate anything in this world as filth, rotten, dirty or infested. There is value to filth also in this symbiotic nature of life. It is the filth that sets apart the clean as clean." - Mankutimma

Themes

LifeNature

Video Section

Video Coming Soon

Detailed video explanations by scholars and experts will be available soon.