Back to List

Kagga 829 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ । ತಳದ ಕಸ ತೇಲುತ್ತ ಬಗ್ಗಡವದಹುದು ॥ ಕಲಕದದ್ದೆದೆ ಕೊಂಚ ಬಿಟ್ಟಿದ್ದೊಡದು ಮರಳಿ । ತಿಳಿಯಹುದು ಶಾಂತಿಯಲಿ - ಮಂಕುತಿಮ್ಮ ॥ ೮೨೯ ॥

koLada jala ninna mana; lOgaru adaroLage iLiye । taLada kasa tElutta baggaDavadahudu ॥ kalakade addade koncha biTTiddoDe adu maraLi । tiLiyahudu shAntiyali - Mankutimma ॥ 829 ॥

Meaning in Kannada

ಮನಸ್ಸೆಂಬುದು ಒಂದು ಸರೋವರ ಅಥವಾ ಕೊಳವಿದ್ದಂತೆ. ಲೋಕದ ವಿಚಾರಗಳು ಅದರೊಳಕ್ಕೆ ಬಿದ್ದರೆ ತಳಗೆ ಅಡಗಿದ್ದ ಕಸ ಕದಡಿ ಹೋಗುತ್ತದೆ ಮತ್ತು ಬಗ್ಗಡವಾಗುತ್ತದೆ. ಮತ್ತೆ ಸ್ವಲ್ಪ ಹೊತ್ತು ಕದಡದೆ ಕಲಕದೆ ಇದ್ದರೆ, ಮತ್ತೆ ತಿಳಿಯಾಗುವುದು ಎಂದು ಮಾನಸ ಸರೋವರದ ವಿಚಾರವನ್ನು ನಮಗೆ ಅರುಹಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು.

Meaning & Interpretation

"Your mind is like the water of the pond. When undisturbed, it will be clear. But people of this world will get into the pond and as a result the dirt from the bottom will float and make it dirty. But if you let it settle without any more disturbance, it will again get cleared. That is the power of finding peace inside." - Mankutimma

Themes

LifeNatureSocietyPeace

Video Section

Video Coming Soon

Detailed video explanations by scholars and experts will be available soon.