Back to List

Kagga 828 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕಳವಳವ ನೀಗಿಬಿಡು, ತಳಮಳವ ದೂರವಿಡು । ಕಳೆ, ತಳ್ಳು ಗಲಭೆ ಗಾಬರಿಯ ಮನದಿಂದ ॥ ಅಲೆದಾಡುತಿರೆ ದೀಪ ಕಣ್ಗೆ ಗುರಿ ತಪ್ಪುವುದು । ತಿಳಿತಿಳಿವು ಶಾಂತಿಯಲಿ - ಮಂಕುತಿಮ್ಮ ॥ ೮೨೮ ॥

kaLavaLa nIgibiDu, taLamaLava dUraviDu । kaLe, taLLu galabhe gAbariya manadinda ॥ aledADutire dIpa kaNge guri tappuvudu । tiLitiLivu shAntiyali - Mankutimma ॥ 828 ॥

Meaning in Kannada

ಜೀವನದ ಕಲೆಯ ಪರಿಯನ್ನು ನಮಗರಿವಾಗಿಸಲು ತಿಳುವಳಿಕೆಯನ್ನು ನೀಡುತ್ತಾ, ಚಿಂತೆಯನ್ನು ಬಿಡು, ಆತಂಕವನ್ನು ದೂರತಳ್ಳು, ಗಾಬರಿಯನ್ನು ಕಡಿಮೆ ಮಾಡಿಕೋ ಮತ್ತು ಮನದಲ್ಲಿ ನಡೆಯುವ ಹೋರಾಟವನ್ನು ದೂರತಳ್ಳು, ಎಂದು ಹೇಳುತ್ತಾ ಒಂದು ಉದಾಹರಣೆಯನ್ನು ನೀಡಿ, ಬೆಳಕು ಒಂದೇ ಕಡೆ ಇದ್ದರೆ ಗುರಿಯನ್ನು ಸರಿಯಾಗಿ ನೋಡಬಹುದು, ಹಾಗಲ್ಲದೆ ಬೆಳಕು ಸರಿದಾಡುತ್ತಿದ್ದರೆ ಗುರಿಸಾಧನೆ ಸಾಧ್ಯವಿಲ್ಲ ಎಂದು ಮನಸ್ಸು ತಿಳಿಯಾಗಿದ್ದಲ್ಲಿ ಶಾಂತಿಯನ್ನು ಪಡೆಯಲು ಸಾಧ್ಯ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Stop being anxious. Give up restlessness. Let your mind be free from rush, violence and fear. These are all distractions. If the light is wavering, the eye loses sight of the goal. Let that not happen to you. Clear wisdom will only be seen when you have peace with in you." - Mankutimma

Themes

WisdomSufferingWarPeace

Video Section

Video Coming Soon

Detailed video explanations by scholars and experts will be available soon.