Back to List

Kagga 827 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಲೋಕದಲಿ ಭಯವಿರಲಿ, ನಯವಿರಲಿ, ದಯೆಯಿರಲಿ । ನೂಕುನುಗ್ಗುಗಳತ್ತ, ಸೋಂಕುರೋಗಗಳು ॥ ಸಾಕಿಸಲಹುವರುಮ್ ಅತ್ತಲೆ ನಿನಗೆ; ನಿನ್ನೆಲ್ಲ । ಲೋಕ ಮೂಲವು ನೋಡೊ - ಮಂಕುತಿಮ್ಮ ॥ ೮೨೭ ॥

lOkadali bhayavirali, nayavirali, dayeyirali । nUku nuggu gaLu atta, sOnku rOgagaLu ॥ sAkisalahuvarum attale ninage; ninna ella । lOka mUlavu nODo - Mankutimma ॥ 827 ॥

Meaning in Kannada

ಜೀವಿಸುವ ಕಲೆಯನ್ನು ಮುಂದುವರೆಸುತ್ತಾ, ಬದುಕುವಾಗ ಭಯವಿರಲಿ, ನಡವಳಿಕೆಯಲ್ಲಿ ನಯವಿರಲಿ ಮತ್ತು ಸೃಷ್ಟಿಯ ಮಿಕ್ಕೆಲ್ಲದರಲ್ಲಿ ದಯೆ ಇರಲಿ ಎಂದು ಹೇಳುತ್ತಾ, ಜನಸಂದಣಿಯಿಂದ ಮತ್ತು ಅವರಿಂದ ನಿನಗೆ ಅಂಟಬಹುದಾದ ರೋಗಗಳಿಂದ, ಅಷ್ಟೇಕೆ, ಸಾಕಿ ಸಲುಹಿದವರಿಂದಲೂ ಸಾಧ್ಯವಾದಷ್ಟು ದೂರವಿರು,ನಿನ್ನ ಗಮನವೆಲ್ಲ ‘ ನೀನು ಎಲ್ಲಿಂದ ಬಂದೆ, ಏನು ತಂದೆ ಮತ್ತೆ ಮುಂದಕ್ಕೆ ಎಲ್ಲಿಗೆ ಮತ್ತು ಹೇಗೆ ಹೋಗಬೇಕು ಎನ್ನುವುದರಲ್ಲಿ ಎಂದು ಒಂದು ಎಚ್ಚರಿಕೆಯ ಮಾತನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

"One must be very careful of his actions in this world. He must tread with fear, humility and compassion. It is in this world that he faces lot of competition (crowd), diseases, relatives who grow him up. This world is practically the root of all his existence. Hence he needs to be very careful of what his actions will entail." - Mankutimma

Themes

LifeLove

Video Section

Video Coming Soon

Detailed video explanations by scholars and experts will be available soon.