Mankutimmana Kagga by D.V. Gundappa
ಕಣ್ದೆರೆದು ನೋಡು, ಚಿತ್ಸತ್ತ್ವಮೂರ್ತಿಯ ನೃತ್ಯ । ಕಣ್ಮುಚ್ಚಿ ನೋಡು, ನಿಶ್ಚಲ ಶುದ್ಧ ಸತ್ತ್ವ ॥ ಉನ್ಮುಖನು ನೀನೆರಡು ಜಗಕವಿರುತಿರಲಾಗ । ಹೃನ್ಮಧ್ಯದಲಿ ಶಾಂತಿ - ಮಂಕುತಿಮ್ಮ ॥ ೮೫೧ ॥
kaNderedu nODu, chit sattva mUrtiya nRutya । kaNmuchchi nODu, nishchala shuddha sattva ॥ unmukhanu nIneraDu jagake avu irutiralu aaga । hRun madhyadali shAnti - Mankutimma ॥ 851 ॥
ಕಣ್ಣನ್ನು ತೆರೆದು ನೋಡಿದರೆ ಪರತತ್ವದ ಪ್ರತಿ ನಿತ್ಯ ಬದಲಾಗುವ ಕೋಟಿ ಕೋಟಿ ರೂಪದ ಸುಂದರ ನೃತ್ಯ, ಲೀಲಾವಿನೋದ. ಕಣ್ಮುಚ್ಚಿ ನೋಡಿದರೆ ಇಡೀ ಜಗತ್ತನ್ನು ಆವರಿಸಿಕೊಂಡು ಆಳುವ ಶುದ್ಧ ಮತ್ತು ನಿಶ್ಚಲ ಪರತತ್ವದ ದರ್ಶನ . ಹೀಗೆ ನೀನು ಎರಡೂ ಸ್ಥಿತಿಗಳನ್ನು ಸಮಭಾವದಿಂದ ನೋಡಿದರೆ ಮನಸ್ಸಿನಂತರಾಳದಲ್ಲಿ ಶಾಂತಿ ನೆಲೆಸುತ್ತದೆ ಎನ್ನುವುದೇ ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.
"Open your eyes and see the dance of the Creator in his creation. Close your eyes and you will see the immovable pure truth. If you can see both these worlds and balance them both, then you will find peace in the middle of your heart." - Mankutimma
Video Coming Soon
Detailed video explanations by scholars and experts will be available soon.